ತುಮಕೂರು : ಅಪ್ಪು ಎಂದೇ ಅಭಿಮಾನಿಗಳಿಂದ ಕರೆಸಿಕೊಂಡಿದ್ದ ನಟ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಸಾವಿನ ಸರಣಿ ಮುಂದುವರಿದಿದೆ.
ಪುನಿತ್ ರಾಜಕುಮಾರ್ ಮೃತಪಟ್ಟ ದಿನದಿಂದ ಊಟ ಬಿಟ್ಟಿದ್ದ ತುಮಕೂರು ತಾಲೂಕಿನ ಅರೆಗುಜ್ಜನಹಳ್ಳಿಯ ಅಭಿಮಾನಿ ಸಾವನ್ನಪ್ಪಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದ ಭೀಮ ನಗರದ ನಿವಾಸಿ ಪುನೀತ್ ಅಪ್ಪಟ ಅಭಿಮಾನಿಯಾಗಿದ್ದ ವಿಡಿಯೋಗ್ರಾಫರ್ ಶಿವಮೂರ್ತಿ ಎಂಬವರು ಕೂಡ ಮೃತಪಟ್ಟಿದ್ದಾರೆ. ಇಂದು ನವೆಂಬರ್ 5 ಇಬ್ಬರು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.