ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಜಾಗರಮುಡಿ ಕ್ರಿಶ್ ಕಾಂಬಿನೇಷನ್ ನಲ್ಲಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರವನ್ನು ಸ್ಟಾರ್ ನಿರ್ಮಾಪಕ ಅಯಾಮ್ ರತ್ನಂ ಅವರು ನಿರ್ಮಿಸುತ್ತಿದ್ದಾರೆ.
ಈ ಚಿತ್ರಕ್ಕೆ ವಿರೂಪಾಕ್ಷ ಎಂದು ಹೆಸರಿಡಲಾಗಿದೆ. ಮೊಘಲ್ ಕಾಲದ ಕಾಲ್ಪನಿಕ ಕಥೆಯೊಂದಿಗೆ ಬರುವ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ವಜ್ರದ ಕಳ್ಳನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಹೈದರಾಬಾದ್ ಉಪನಗರಗಳಲ್ಲಿ ದರ್ಬಾರ್ ಸೆಟ್ ಸ್ಥಾಪಿಸಲಾಗಿದೆ.
ಈ ಚಿತ್ರದಲ್ಲಿ ಪವನ್ ಎದುರು ನಾಯಕಿಯಾಗಿ ನಿಧಿ ಅಗರ್ವಾಲ್ ನಟಿಸುತ್ತಿದ್ದಾರೆ. ಇಸ್ಮಾರ್ಟ್ ಶಂಕರ್ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಿಧಿ ಇದೀಗ ಪವರ್ ಸ್ಟಾರ್ ಜೊತೆ ನಟಿಸುವುದರ ಮೂಲಕ ಬಂಪರ್ ಅವಕಾಶ ಪಡೆದಿದ್ದಾರೆ. ಹಾಗೇ ಈ ಚಿತ್ರದಲ್ಲಿ ಬಾಲಿವಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.