Select Your Language

Notifications

webdunia
webdunia
webdunia
webdunia

ತಮಿಳಿನ ಸೂಪರ್ ಹಿಟ್ ಚಿತ್ರ ‘ವೇದಲಂ’ ತೆಲುಗಿಗೆ ರಿಮೇಕ್

ತಮಿಳಿನ ಸೂಪರ್ ಹಿಟ್ ಚಿತ್ರ ‘ವೇದಲಂ’ ತೆಲುಗಿಗೆ ರಿಮೇಕ್
ಹೈದರಾಬಾದ್ , ಶುಕ್ರವಾರ, 23 ಅಕ್ಟೋಬರ್ 2020 (13:35 IST)
ಹೈದರಾಬಾದ್ : ತಮಿಳಿನ ಸೂಪರ್ ಹಿಟ್ ಚಿತ್ರ ‘ವೇದಲಂ’ ತೆಲುಗಿಗೆ ರಿಮೇಕ್ ಆಗಲಿದ್ದು, ಇದರಲ್ಲಿ ಖ್ಯಾತ ನಟರೊಬ್ಬರು ನಟಿಸುತ್ತಿದ್ದಾರಂತೆ.

ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ನಟಿಸುತ್ತಿದ್ದಾರಂತೆ. ಇದನ್ನು ಶಕ್ತಿ ಖ್ಯಾತಿಯ ಮೆಹರ್ ರಮೇಶ್ ನಿರ್ದೇಶಿಸಲಿದ್ದಾರಂತೆ. ಈ ಚಿತ್ರದಲ್ಲಿ  ಮೆಗಾಸ್ಟಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರಿಂದ ಆಕ್ಷನ್ ದೃಶ್ಯಗಳನ್ನು ನಿರ್ದೇಶಿಸಲು ರಾಮ್ -ಲಕ್ಷ್ಮಣ್ ಜೋಡಿಯ ಜೊತೆ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ.

ಅನಿಲ್ ಸುಂಕರಾ ಈ ಚಿತ್ರವನ್ನು ನಿರ್ಮಿಸುತ್ತಿದ್ದು 2021ರಲ್ಲಿ ಇದರ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ಇತ್ತೀಚೆಗೆ ಸಾಯಿ ಪಲ್ಲವಿ ಅಥವಾ ಕೀರ್ತಿ ಸುರೇಶ್ ಅವರು ಚಿರಂಜೀವಿ ಅವರ ಸಹೋದರಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಂದರ್ ಸಿ ನಿರ್ದೇಶನದ ಚಿತ್ರದಲ್ಲಿ ಕಥೆ ಕೇಳದೆ ನಟಿಸಲು ಸಿದ್ಧರಿದ್ದರಂತೆ ಈ ಹಾಸ್ಯನಟ