Webdunia - Bharat's app for daily news and videos

Install App

ಬರ್ತಡೇ ದಿನವೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ತಮಿಳು ನಟ ರಾಘವ ಲಾರೆನ್ಸ್‌

Sampriya
ಮಂಗಳವಾರ, 29 ಅಕ್ಟೋಬರ್ 2024 (18:45 IST)
Photo Courtesy X
ಕಾಂಚನ ಸಿನಿಮಾ ಮೂಲಕ ಹೊಸ ಸಂಚಲನ ಸೃಷ್ಟಿಸಿದ ತಮಿಳು ನಟ ರಾಘವ ಲಾರೆನ್ಸ್ ಅವರು ತಮ್ಮ ಹುಟ್ಟು ಹಬ್ಬದ ದಿನ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ.

ಇಂದು 48ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅವರು ಈ ಸಂದರ್ಭದಲ್ಲಿ ರಾಘವ ಲಾರೆನ್ಸ್ ನಟನೆಯ 25ನೇ ಚಿತ್ರವನ್ನು ಘೋಷಣೆ ಮಾಡಲಾಗಿದೆ.  ಚಿತ್ರಕ್ಕೆ 'ಕಾಲ ಭೈರವ' ಎಂದು ಹೆಸರಿಡಲಾಗಿದೆ.

ಕಾಲ ಭೈರವ ಚಿತ್ರಕ್ಕೆ ಕಿಲಾಡಿ ಹಾಗೂ ರಾಕ್ಷಸುಡು ಖ್ಯಾತಿಯ ರಮೇಶ್ ವರ್ಮಾ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ಹೊಸ ಸಿನಿಮಾ ಬಗ್ಗೆ ನಿರ್ದೇಶಕ ರಮೇಶ್ ವರ್ಮಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಚಿತ್ರವು ಆ್ಯಕ್ಷನ್‌ ಸನ್ನಿವೇಶಗಳೊಂದಿಗೆ ಮೂಡಿಬರಲಿದ್ದು, ಸೂಪರ್‌ ಹಿರೋ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.


‘ನನ್ನ ಹುಟ್ಟುಹಬ್ಬದಂದು ಚಿತ್ರದ ಹೆಸರು ಘೋಷಿಸಿರುವುದು ನನಗೆ ಸಂತೋಷ ತಂದಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಸದಾ ಇರಲಿ‘ ಎಂದು ನಟ ರಾಘವ ಲಾರೆನ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ರಾಜ್ ನಿಡಿಮೋರು ಜತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ವಿದೇಶದಲ್ಲಿ ಒಟ್ಟಾಗಿ ಆತ್ಮೀಯವಾಗಿ ಕಾಣಿಸಿಕೊಂಡ ಸಮಂತಾ

ಮಾಶಾ ಘರ್ ಖ್ಯಾತಿಯ ಪಾಕ್‌ ನಟಿ ಹುಮೈರಾ ಅಸ್ಗರ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಶಿವಣ್ಣನ ಲುಕ್‌ಗೆ ಎಲ್ಲರೂ ಫಿದಾ

ಮುಂದಿನ ಸುದ್ದಿ
Show comments