Select Your Language

Notifications

webdunia
webdunia
webdunia
webdunia

ಸಾಯೋಕು ಜೈ, ಸಾಯಿಸೋಕು ಸೈ ಅಂತಿದ್ದಾರೆ ತಮನ್ನಾ

ನಟಿ ತಮನ್ನಾ
Hyderabad , ಬುಧವಾರ, 21 ಡಿಸೆಂಬರ್ 2016 (09:34 IST)
ಅದಕ್ಕಾಗಿ ಸಾಯಸಲೂ, ಸಾಯಲೂ ಸಿದ್ಧ ಎನ್ನುತ್ತಿದ್ದಾರೆ ಮಿಲ್ಕಿಬ್ಯೂಟಿ ತಮನ್ನಾ. ಇದೇನಿದು ಸಿನಿಮಾ ಡೈಲಾಗ್ ತರಹ ಇದೆಯಾ? ಇದೆಲ್ಲಾ ರೀಲ್‍ಗಾಗಿ ಅಲ್ಲದೆ ರಿಯಲ್ ಆಗಿಯೇ ಹೇಳಿದ್ದಾರೆ ತಮನ್ನಾ. ಕೆಲವು ಸಿನಿಮಾಗಳು ತಾರೆಗಳ ಖಾಸಗಿ ಬದುಕಿನ ದಟ್ಟ ಪ್ರಭಾವ ಬೀರುತ್ತವೆ. ತಾರೆಯೊಬ್ಬರು ಹಿಂತಿರುಗಿ ನೋಡಿಕೊಂಡಾಗ ಒಂದೇ ಒಂದು ಚಿತ್ರವಾದರೂ ಹೆಮ್ಮೆಪಡುವಂತಿರಬೇಕು.
 
ಆ ರೀತಿ ಇಲ್ಲ ಅಂದರೆ ಅವರ ಬಣ್ಣದ ಬದುಕಿಗೆ ಅರ್ಥವಿರಲ್ಲ. ತಮನ್ನಾ ಪಾಲಿಗೆ ಆ ರೀತಿಯ ಒಂದು ಸಿನಿಮಾ ಬಾಹುಬಲಿ. ಈ ಸಿನಿಮಾ ತನ್ನ ವೃತ್ತಿಜೀವನದಲ್ಲಿ ಬೆಸ್ಟ್ ಅನ್ನುವುದು ಅವರ ನಂಬಿಕೆ. ಅದರ ಬಗ್ಗೆ ಮಾತನಾಡಬೇಕಾದರೆ ಭಾವುಕರಾಗುತ್ತಾರಂತೆ. ಈ ಚಿತ್ರದಲ್ಲಿ ಅಭಿನಯಿಸಿರುವ ಬಗ್ಗೆ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ ತಮನ್ನಾ. 
 
ಬಾಹುಬಲಿ ಚಿತ್ರದ ಅವಂತಿಕಾ ಪಾತ್ರವನ್ನು ಜೀವನದಲ್ಲಿ ಮರೆಯಲಾರೆ. ಆ ರೀತಿಯ ಅವಕಾಶ ಬಂದಿದ್ದು ನನ್ನ ಅದೃಷ್ಟ. ನನ್ನ ಕೆರಿಯಲ್ ಡೌನ್ ಆದ ಸಂದರ್ಭದಲ್ಲಿ ಬಾಹುಬಲಿ ಚಿತ್ರದಲ್ಲಿ ಅಭಿನಯಿಸುವ ಚಾನ್ಸ್ ಸಿಕ್ಕಿತು. ಈ ಅವಕಾಶ ಸಿಗುತ್ತದೆಂದು ಕನಸಿನಲ್ಲೂ ಊಹಿಸಿರಲಿಲ್ಲ. ಆ ಚಿತ್ರಕ್ಕಾಗಿ ಸಾಯೋದಕ್ಕಾದರೂ, ಸಾಯಿಸೋದಕ್ಕಾದರೂ ರೆಡಿ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ. ಬಾಹುಬಲಿ 2 ಚಿತ್ರದಲ್ಲೂ ತಮನ್ನಾ ಅಭಿನಯಿಸುತ್ತಿದ್ದಾರೆ. ಈ ತಿಂಗಳ ಕೊನೆಗೆ ಚಿತ್ರೀಕರಣ ಮುಗಿಯಲಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾತ್‍ರೂಮಿನಲ್ಲಿ ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಶ್ರೀಯಾ ಸರನ್!