ಕನ್ನಡದ ’ಚಂದ್ರ’ ಚಿತ್ರದಲ್ಲಿ ಅಭಿನಯಿಸಿದ್ದ ಶ್ರೀಯಾ ಸರನ್ ದಕ್ಷಿಣ ಭಾರತದ ಟಾಪ್ ಹೀರೋಗಳ ಜೊತೆಗೆ ಅಭಿನಯಿಸಿದ್ದಾರೆ. ಕೆಲ ಸಮಯ ಅವಕಾಶಗಳಿಲ್ಲದೆ ಐಟಂ ಸಾಂಗ್ ಸಹ ಮಾಡಬೇಕಾಯಿತು. ಆದರೆ ಟಾಲಿವುಡ್ ಹೀರೋ ಬಾಲಕೃಷ್ಣ ಮೂಲಕ ಅದೃಷ್ಟ ಕೈಹಿಡಿದೆ. ಭಾರಿ ಬಜೆಟ್ನ ಗೌತಮಿಪುತ್ರ ಶಾತಕರ್ಣಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇತ್ತೀಚೆಗೆ ದಿನಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಾರೆ ಶ್ರೀಯಾ. ಕೆಲವೊಂದು ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ತನಗೆ ಒಬ್ಬ ಶ್ರೀಮಂತ ಕುಟುಂಬದ ವ್ಯಕ್ತಿಯೊಬ್ಬರು ತುಂಬಾ ಅಳೋಹಂಗೆ ಮಾಡಿದರೆಂದೂ, ತಾನು ಅಳುತ್ತಿದ್ದರೆ ಸಮಾಧಾನ ಮಾಡುವುದನ್ನು ಬಿಟ್ಟು ಇನ್ನಷ್ಟು ಕೆಟ್ಟದಾಗಿ ನಡೆದುಕೊಂಡರು ಎಂದಿದ್ದಾರೆ.
ನಾನು ತುಂಬಾ ಇಷ್ಟಪಡುತಿದ್ದ ಗಾಡಿಯೊಂದರ ಕ್ಲಚ್ ಮುರಿದು ಹಾಕಿದಾಗ ತುಂಬಾ ನೋವಾಗಿತ್ತು. ಈ ಘಟನೆಯಿಂದ ತುಂಬಾ ಅಳು ಬಂದಿತ್ತು. ನಾನು ಅಳುತ್ತಿದ್ದರೆ ಇಷ್ಟಕ್ಕೆಲ್ಲಾ ಅಳಬೇಕಾ ಎಂದು ಗೇಲಿ ಮಾಡಿದ್ದರು. ಅಳು ಇನ್ನಷ್ಟು ಬಿಕ್ಕಳಿಸಿ ಬಂದಿತ್ತು. ಅಲ್ಲಿ ಕೂರಕ್ಕಾಗದೆ ಬಾತ್ರೂಮಿಗೆ ಹೋಗಿ ಬಿಕ್ಕಿಬಿಕ್ಕಿ ಅತ್ತಿದ್ದೇನೆ ಎಂದು ಶ್ರೀಯಾ ಸರನ್ ಹೇಳಿಕೊಂಡಿದ್ದಾರೆ.
ಆ ವ್ಯಕ್ತಿ ಯಾರು? ಏನು? ಯಾವಾಗ ಈ ಘಟನೆ ನಡೆಯಿತು ಎಂಬುದನ್ನು ಮಾತ್ರ ಶ್ರೀಯಾ ಹೇಳಿಲ್ಲ. ಬಹುಶಃ ಮಾತಿ ಪ್ರಿಯತಮ ಇರಬೇಕು. ಇಲ್ಲದಿದ್ದರೆ ಇಷ್ಟೆಲ್ಲಾ ನಡೆಯಲು ಸಾಧ್ಯವಿಲ್ಲ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಶ್ರೀಯಾಗೂ ಆ ವ್ಯಕ್ತಿಗೂ ಏನು ಸಂಬಂಧವೋ?
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.