ಚೆನ್ನೈ : ಪೂವೆಲ್ಲಂ ಕೇಟ್ಟುಪ್ಪರ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ ಸೂರ್ಯ-ಜ್ಯೋತಿಕಾ ಬಳಿಕ ಪ್ರೀತಿಸಿ ಮದುವೆಯಾಗಿದ್ದಾರೆ. ಆನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಮ್ಮೆ ಈ ದಂಪತಿ ಜೊತೆಯಾಗಿ ನಟಿಸಲಿದ್ದಾರಂತೆ.
ಹೌದು. ನಟ ಸೂರ್ಯ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ, ಮಲಯಾಳಂ ಚಿತ್ರದ ನಿರ್ಮಾಪಕಿ ಅಂಜಲಿ ಮೆನನ್ ಮತ್ತು ತಮಿಳು ನಿರ್ದೇಶಕಿ ಹಲಿತಾ ಶಮೀಮ್ ಅವರು ಬಹುದಿನಗಳ ಬಳಿಕ ಸೂರ್ಯ ಮತ್ತು ಜ್ಯೋತಿಕಾ ಒಟ್ಟಿಗೆ ನಟಿಸುವ ಚಿತ್ರಕಥೆ ರಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಎಲ್ಲಾ ಸರಿಯಾಗಿದ್ದರೆ ಮುಂದಿನ ವರ್ಷದ ಅಂತ್ಯದ ವೇಳೆಗೆ ಈ ಆಸಕ್ತಿದಾಯಕ ಯೋಜನೆಯನ್ನು ಪ್ರಾರಂಭಿಸಬಹುದು. ಆದರೆ ಈ ಚಿತ್ರದಲ್ಲಿ ನಿರ್ದೇಶಕರ ಕರ್ತವ್ಯವನ್ನು ಇಬ್ಬರಲ್ಲಿ ಯಾರು ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ನಟ ಸೂರ್ಯ ಹೇಳಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!