Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಅಭಿಮಾನಿಗಳನ್ನು ಭೇಟಿಯಾಗಲಿರುವ ರಜನಿಕಾಂತ್

rajani kanth
ಚೆನ್ನೈ , ಶುಕ್ರವಾರ, 9 ಜೂನ್ 2017 (10:59 IST)
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ಶೀಘ್ರದಲ್ಲಿ ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. 
 
ಇತ್ತೀಚೆಗಷ್ಟೇ ಅಭಿಮಾನಿಗಳನ್ನು ಭೇಟಿಯಾಗಿದ್ದ ರಜನಿ ತಮ್ಮ ರಾಜಕೀಯ ಪ್ರವೇಶ ಸಾಧ್ಯತೆಯನ್ನು ಪ್ರಸ್ತಾಪಿಸಿದ್ದರು. ಯಾವುದಕ್ಕೂ ಯುದ್ಧಕ್ಕೆ ಸನ್ನದ್ಧರಾಗಿರಿ ಎಂದು ಅಭಿಮಾನಿಗಳಿಗೆ ಮಾರ್ಮಿಕವಾಗಿ ಹೇಳಿಕೆ ನೀಡಿದ್ದರು. ಈಗ ಮತ್ತೊಮ್ಮೆ ಅಭಿಮಾನಿಗಳ ಭೇಟಿಯಾಗುವುದಾಗಿ ರಜನಿ ತಿಳಿಸಿದ್ದಾರೆ.
 
ಮುಂಬೈನಲ್ಲಿ ಕಾಳ ಕರಿಕಾಳನ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರೈಸಿ ವಾಪಸಾದ ಸೂಪರ್ ಸ್ಟಾರ್ ಇದುವರೆಗಿನ ತಮ್ಮ ಕೆಲಸದ ಬಗ್ಗೆ ತೃಪ್ತಿಯಿರುವುದಾಗಿ ತಿಳಿಸಿದ್ದಾರೆ.  ಈ ವರೆಗೆ  ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಖಚಿತ ಹೇಳಿಕೆಯನ್ನು ನೀಡಿಲ್ಲದ ರಜನಿ  ಕಳೆದ ಬಾರಿ ಅಭಿಮಾನಿಗಳ ಭೇಟಿ ವೇಳೆ ಅಂತಹ ಒಂದು ಸುಳಿವನ್ನು ಮಾತ್ರ ನೀಡಿದ್ದರು. ಈ ಬಾರಿ ಅಭಿಮಾನಿಗಳ ಭೇಟಿ ವೇಳೆ  ರಾಜಕೀಯ ಪ್ರವೇಶವನ್ನು ಧೃಡಿಕರಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

 

 
 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಮ್ಮೆ ವಿವಾದದಲ್ಲಿ ದುನಿಯಾ ವಿಜಿಯ ‘ಮಾಸ್ತಿ ಗುಡಿ’