Select Your Language

Notifications

webdunia
webdunia
webdunia
webdunia

ಸನ್ನಿ ಲಿನೋನ್ ಸಂಭಾವನೆ ಎಷ್ಟು ಗೊತ್ತಾ?

ಸನ್ನಿ ಲಿನೋನ್ ಸಂಭಾವನೆ ಎಷ್ಟು ಗೊತ್ತಾ?
Mumbai , ಭಾನುವಾರ, 5 ಮಾರ್ಚ್ 2017 (10:46 IST)
ಕೆನಡಾ ಪಾಪ್ ಗಾಯಕ ಜಸ್ಟಿನ್ ಬೀಬರ್ ಮೇ 10ಕ್ಕೆ ಮುಂಬೈಗೆ ಆಗಮಿಸುತ್ತಿದ್ದಾರೆ. ಪ್ರವಾಸದ ಭಾಗವಾಗಿ ಆಗಮಿಸುತ್ತಿರುವ ಅವರು ಕಾಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಅವರ ಹಾಡಿಗೆ ಬಾಲಿವುಡ್ ನಟಿಯರಾದ ಸನ್ನಿ ಲಿಯೋನ್ ಸೇರಿದಂತೆ ದೀಪಿಕಾ ಪಡುಕೋಣೆ, ಆಲಿಯಾ ಭಟ್, ವರುಣ್ ಧವನ್ ಸೊಂಟ ಬಳುಕಿಸಲಿದ್ದಾರಂತೆ.
 
ಪಾಪ್ ತಾರೆ ಜತೆಗೆ ರೊಮ್ಯಾಂಟಿಕ್ ಬೆಡಗಿ ಸನ್ನಿ ಲಿಯೋನ್ ಹೆಜ್ಜೆ ಹಾಕಲಿರುವುದು ಈಗ ಚರ್ಚೆಯ ವಿಷಯವಾಗಿದೆ. ಜಸ್ಟಿನ್ ಬೀಬರ್ ಮತ್ತು ಸನ್ನಿ ಲಿಯೋನ್ ಅಭಿಮಾನಿಗಳ ಪಾಲಿಗೆ ಇದು ಮರೆಯಲಾಗದ ಕಾರ್ಯಕ್ರಮವಾಗಲಿದೆ ಎಂದೇ ಭಾವಿಸಲಾಗಿದೆ.
 
ವಿಶೇಷ ಎಂದರೆ, ಒಂದು ಹಾಡಿಗೆ ಸನ್ನಿ ಲಿಯೋನ್ ಕೇಳಿರುವ ಮೊತ್ತಕ್ಕೆ ಬಾಲಿವುಡ್ ದಂಗಾಗಿದೆ. ಹಾಡೊಂದಕ್ಕೆ ಕುಣಿಯಲು ಸನ್ನಿ ಲಿಯೋನ್ ಬರೋಬ್ಬರು ರೂ.1.5 ಕೋಟಿ ಡಿಮ್ಯಾಂಡ್ ಮಾಡಿದ್ದಾರೆ. ಸನ್ನಿ ಕೇಳಿದ ಮೊತ್ತವನ್ನು ಕೊಡಲು ಕಾರ್ಯಕ್ರಮ ನಿರ್ವಾಹಕರು ಅಂಗೀಕರಿಸಿದ್ದಾರೆ ಕೂಡ. ಸನ್ನಿ ಕೇಳಿದ ಮೊತ್ತಕ್ಕೆ ಬೇರೆ ತಾರೆಗಳೂ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆರಾಧ್ಯ ವಿಚಾರವಾಗಿ ಐಶ್ವರ್ಯಾ-ಅಭಿಷೇಷ್ ಕಿತ್ತಾಟ?