Select Your Language

Notifications

webdunia
webdunia
webdunia
webdunia

ಆರಾಧ್ಯ ವಿಚಾರವಾಗಿ ಐಶ್ವರ್ಯಾ-ಅಭಿಷೇಷ್ ಕಿತ್ತಾಟ?

ಆರಾಧ್ಯ ವಿಚಾರವಾಗಿ ಐಶ್ವರ್ಯಾ-ಅಭಿಷೇಷ್ ಕಿತ್ತಾಟ?
Mumbai , ಭಾನುವಾರ, 5 ಮಾರ್ಚ್ 2017 (10:21 IST)
ಮಕ್ಕಳ ವಿಚಾರವಾಗಿ ತಂದೆ ತಾಯಿ ಕಿತ್ತಾಡುವುದು ಎಲ್ಲಾ ಕುಟುಂಬಗಳಲ್ಲೂ ಸಹಜವಾಗಿ ನಡೆಯುವ ಘಟನೆ. ಇದಕ್ಕೆ ಬಾಲಿವುಡ್ ಸಹ ಹೊರತಲ್ಲ. ತಮ್ಮ ಪುತ್ರಿ ಆರಾಧ್ಯ ವಿಚಾರವಾಗಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಕಿತ್ತಾಡಿರುವ ಘಟನೆ ನಡೆದಿದೆ. 
 
ಈ ಹಿಂದೊಮ್ಮೆ ’ಏ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ಐಶ್ವರ್ಯಾ ರೈ ಮತ್ತು ರಣಬೀರ್ ಕಪೂರ್ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಅಭಿನಯಿಸಿದ್ದಕ್ಕೆ ಗಂಡ-ಹೆಂಡತಿ ನಡುವೆ ಮನಸ್ತಾಪ ಉಂಟಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಐಶ್ ಮತ್ತು ಅಭಿ, ಆ ರೀತಿ ಏನಿಲ್ಲ. ವೃತ್ತಿಸಂಬಂಧಿ ವಿಚಾರಗಳಲ್ಲಿ ತಲೆ ಹಾಕಲ್ಲ. ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ ಎಂದಿದ್ದರು.
 
ಅದಾದ ಬಳಿಕ ಈಗ ಆರಾಧ್ಯ ವಿಚಾರವಾಗಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಾಲನಟಿಯಾಗಿ ಆರಾಧ್ಯರನ್ನು ಚಿತ್ರರಂಗಕ್ಕೆ ಪರಿಚಯಿಸಬೇಕೆಂಬುದು ಅಭಿಷೇಕ್ ಬಚ್ಚನ್ ಆಸೆ. ಈಗಲೇ ಚಿತ್ರರಂಗಕ್ಕೆ ಅಡಿಯಿಟ್ಟರೆ ಮುಂದೆ ತನ್ನ ಮಗಳು ದೊಡ್ಡ ಸ್ಟಾರ್ ಆಗುತ್ತಾಳೆ ಎಂಬ ಬಯಕೆ ಅಭಿಷೇಕ್ ಅಭಿಮತ.
 
ಆದರೆ ತನ್ನ ಮಗಳು ಈಗಲೇ ಬೆಳ್ಳಿಪರದೆಗೆ ಅಡಿಯಿಡುವುದು ಐಶ್ವರ್ಯಾ ರೈಗೆ ಸುತಾರಾಂ ಇಷ್ಟವಿಲ್ಲ. ಸ್ವಲ್ಪ ದಿನಗಳ ಮಟ್ಟಿಗೆ ಆರಾಧ್ಯಳನ್ನು ಕ್ಯಾಮೆರಾ ಮುಂದೆ ತರುವುದು ಬೇಡ ಎಂಬುದು ಅವರ ಬಯಕೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ, ಕಿತ್ತಾಟ ಆಗಿದೆ ಎನ್ನುತ್ತಿವೆ ಬಾಲಿವುಡ್ ಮೂಲಗಳು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗದಿದ್ದರೂ ಅವಳಿ ಮಕ್ಕಳಿಗೆ ತಂದೆಯಾದ ಕರಣ್ ಜೋಹರ್