ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಸ್ಮಾರಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದಾರೆ. ಈ ವೇಳೆ ಅಂಬಿ ಪತ್ನಿ, ಸಂಸದೆ ಸುಮಲತಾ ಕಣ್ಣೀರು ಹಾಕಿದ ಘಟನೆ ನಡೆದಿದೆ.
ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರನ್ನು ಇಡಲಾಯಿತು. ಬಳಿಕ ಸ್ಮಾರಕವನ್ನು ಉದ್ಘಾಟಿಸಲಾಗಿದೆ. ಈ ವೇಳೆ ವೇದಿಕೆಯಲ್ಲಿ ಮಾತನಾಡುವಾಗ ಅಂಬಿ ನೆನೆದು ಸುಮಲತಾ ಭಾವುಕರಾದರು.
ಅಂಬರೀಶ್ ಮಂಡ್ಯ ಜನರಿಗೆ ಮಾಡಿದ ಕೆಲಸಗಳನ್ನು ವೇದಿಕೆಯಲ್ಲಿ ಸ್ಮರಿಸಿದ ಸುಮಲತಾ ಪತಿಯ ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು.