Webdunia - Bharat's app for daily news and videos

Install App

ನೀವಿಲ್ಲದ ಎರಡು ವರ್ಷ! ರೆಬಲ್ ಸ್ಟಾರ್ ಅಂಬರೀಶ್ ಬಗ್ಗೆ ಪತ್ನಿ ಸುಮಲತಾ ಸುದೀರ್ಘ ಬರಹ

Webdunia
ಮಂಗಳವಾರ, 24 ನವೆಂಬರ್ 2020 (09:32 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿ ಇಂದಿಗೆ ಎರಡು ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಪತ್ನಿ ಸುಮಲತಾ ಅಂಬರೀಶ್ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಬರಹ ಬರೆದುಕೊಂಡಿದ್ದಾರೆ.


ನೀವಿಲ್ಲದ ಎರಡು ವರ್ಷ..ನಿಮ್ಮನ್ನು ನೋಡಲೋಸ್ಕರ ನಾನು ಆಗಾಗ ಕಣ್ಣು ಮುಚ್ಚಿಕೊಂಡು ನೆನೆಸಿಕೊಳ್ಳುತ್ತೇನೆ. ನಿಮ್ಮ ಧ್ವನಿ ಕೇಳಲು ಆಗಾಗ ಕಿವಿ ಮುಚ್ಚಿಕೊಳ್ಳುತ್ತೇನೆ. ಆದರೆ ನನ್ನ ಹೃದಯವನ್ನು ಮುಚ್ಚಲಾರೆ. ಅದು ನಿಮ್ಮ ಪ್ರೀತಿಯನ್ನು, ಐಕ್ಯತೆಯನ್ನು, ಎಲ್ಲಾ ನೆನಪುಗಳನ್ನು ಹೊತ್ತು ನಡೆಯಬೇಕು. ನಿಮ್ಮ ನೆನಪನ್ನು ಹೊತ್ತುಕೊಳ್ಳುವಷ್ಟು ದೊಡ್ಡ ಹೃದಯ ಈ ಜಗತ್ತಿನಲ್ಲೇ ಇಲ್ಲ ಬಿಡಿ.  ನೀವಿಲ್ಲದ ಎರಡು ವರ್ಷ, ಪ್ರತಿಕ್ಷಣವನ್ನೂ ನೆನೆಸಿಕೊಳ್ಳುತ್ತಿದ್ದೆ ಮತ್ತು ನೀವು ನಮಗೆ ಮಾಡಿದ ಒಳಿತನ್ನು ನೆನೆಸಿಕೊಳ್ಳುತ್ತಿದ್ದೆ. ಆ ಕ್ಷಣಗಳು, ಆ ನಗು ಎಲ್ಲವೂ.. ನೀವು ಬಿಟ್ಟು ಹೋದ ಪ್ರೀತಿ, ಒಳ್ಳೆಯ ಕೆಲಸಗಳು ನಮ್ಮ ಭವಿಷ್ಯಕ್ಕೆ ಶ್ರೀರಕ್ಷೆ. ನನ್ನ ಕೊನೆಯ ಉಸಿರುವವರೆಗೂ, ನನ್ನ ಪ್ರತೀ ನಗುವಿನಲ್ಲೂ ನೀವಿರುತ್ತೀರಿ. ನನಗೆ ಏನೇ ಆದರೂ ನೀವು ನನ್ನನ್ನು ಕೈ ಹಿಡಿಯುತ್ತೀರಿ ಎಂದು ಗೊತ್ತು. ಮತ್ತೆ ನಾವು ಒಂದಾಗುವವರೆಗೂ ನನಗೆ ಶಕ್ತಿ ನೀಡಿ’ ಎಂದು ಸುಮಲತಾ ಸುದೀರ್ಘವಾಗಿ ಭಾವುಕ ಸಂದೇಶ ಬರೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಊಹಿಸಲಾಗದ್ದನ್ನು ಸಾಧಿಸಿದ ರಿಷಭ್‌ ಶೆಟ್ಟಿ: ಕಾಂತಾರ 1 ಸಿನಿಮಾವನ್ನು ಕೊಂಡಾಡಿದ ಜ್ಯೂ.ಎನ್‌ಟಿಆರ್‌, ಶಿವಣ್ಣ

ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರು ಫಿದಾ: ರಿಷಭ್‌ ಶೆಟ್ಟಿ ಅಪ್ಪಿಕೊಂಡು ಪತ್ನಿ ಪ್ರಗತಿ ಭಾವುಕ

ಹಾಡು ನಿಲ್ಲಿಸಿದ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಛನ್ನುಲಾಲ್ ಮಿಶ್ರಾ: ಮೋದಿ ಕಂಬನಿ

Kantara chapter 1: ಮೈ ರೋಮಾಂಚನಗೊಳಿಸುವ ಕಾಂತಾರ ಚಾಪ್ಟರ್ 1 ವಿಮರ್ಶೆ ಇಲ್ಲಿದೆ

BB Season 12: ಮೂರನೇ ದಿನ ಧನುಷ್ ವಿರುದ್ಧ ರೆಬಲ್ ಆದ ಅಶ್ವಿನಿ ಗೌಡಗೆ ನೆಟ್ಟಿಗರಿಂದ ಕ್ಲಾಸ್‌

ಮುಂದಿನ ಸುದ್ದಿ
Show comments