Select Your Language

Notifications

webdunia
webdunia
webdunia
webdunia

ಬರ್ತಡೇ ದಿನ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ನಟ ಶ್ರೀಮುರಳಿ

Parak Kannada Cinema, Srimuruli Birthday Celebration, SriMuruli UpComing Movie

Sampriya

ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2024 (16:18 IST)
Photo Courtesy X
ಬೆಂಗಳೂರು: ನವ ನಿರ್ದೇಶಕ ಹಾಲೇಶ್‌ ಕೋಗುಂಡಿ ಅವರು ನಿರ್ದೇಶನದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ  ಅವರ ಹೊಸ ಸಿನಿಮಾವನ್ನು ಘೋಷಿಸಿದರು.

ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಶ್ರೀಮುರಳಿ ಅವರು ತಮ್ಮ ಮುಂದಿನ ಪರಾಕ್ ಸಿನಿಮಾವನ್ನು ಘೋಷಣೆ ಮಾಡಿದರು. ಒಂದು ಕೈಯಲ್ಲಿ ಗನ್ ಹಿಡಿದು ಬೆನ್ನು ತೋರಿಸ್ತಿರುವ ಶ್ರೀಮುರಳಿ ಬೆನ್ನಿಗೆ ಪಿಸ್ತೂಲ್ ಹಾಕಿ ಪ್ರತ್ಯಕ್ಷರಾಗಿದ್ದಾರೆ.

ನವ ನಿರ್ದೇಶಕ ಹಾಲೇಶ್ ಕೋಗುಂಡಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿರುವ ಹಾಲೇಶ್, ಪರಾಕ್ ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ಮಾರ್ಚ್‌ನಲ್ಲಿ 'ಪರಾಕ್' ಚಿತ್ರದ ಶೂಟಿಂಗ್ ಶುರುವಾಗಲಿದೆ. ದೊಡ್ಡ ಬಜೆಟ್, ದೊಡ್ಡ ತಾರಾಗಣದಲ್ಲಿ ಚಿತ್ರ ನಿರ್ಮಾಣ ಮಾಡಲು ಚಿತ್ರ ಸಜ್ಜಾಗುತ್ತಿದೆ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ನಡಿ 'ಪರಾಕ್' ಸಿನಿಮಾ ನಿರ್ಮಾಣವಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪವಿತ್ರಾ ಗೌಡಗೆ ಜೈಲಲ್ಲೂ ಮೇಕಪ್ ಕಿಟ್ ಕೊಡ್ತಿದ್ರಾ: ನೆಟ್ಟಿಗರ ವ್ಯಂಗ್ಯ