Webdunia - Bharat's app for daily news and videos

Install App

ಪುಷ್ಪ 2 ಹಾಡಿನಲ್ಲಿ ಕುಣಿಯಲು ಕೋಟಿ ಕೊಟ್ರೂ ತಿರಸ್ಕರಿಸಿದ ಶ್ರೀಲೀಲಾ

Krishnaveni K
ಭಾನುವಾರ, 10 ಮಾರ್ಚ್ 2024 (09:49 IST)
Photo Courtesy: Twitter
ಹೈದರಾಬಾದ್: ರಶ್ಮಿಕಾ ಮಂದಣ್ಣರಂತೇ ಕನ್ನಡದಿಂದ ತೆಲುಗಿಗೆ ಹೋಗಿ ಕ್ಲಿಕ್ ಆಗಿರುವ ನಟಿಯೆಂದರೆ ಶ್ರೀಲೀಲಾ. ಪಕ್ಕಾ ಕನ್ನಡತಿ ನಟಿಗೆ ಈಗ ತೆಲುಗಿನ ದೊಡ್ಡ ದೊಡ್ಡ ಹೀರೋಗಳ ಸಿನಿಮಾದಲ್ಲಿ ಚಾನ್ಸ್ ಸಿಗುತ್ತಿದೆ. ಅದೇ ರೀತಿ ಪುಷ್ಪ 2 ಸಿನಿಮಾದಲ್ಲೂ ಅವಕಾಶ ಸಿಕ್ಕಿತ್ತು. ಆದರೆ ಅದನ್ನು ಅವರು ನಿರಾಕರಿಸಿದ್ದಾರಂತೆ.

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ಪುಷ್ಪ ಭಾಗ 1 ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಚಿತ್ರತಂಡ ಎರಡನೇ ಭಾಗ ನಿರ್ಮಾಣ ಮಾಡುತ್ತಿದೆ. ಮೊದಲ ಭಾಗದಲ್ಲಿ ಸಿನಿಮಾದಷ್ಟೇ ಹಾಡುಗಳೂ ಸದ್ದು ಮಾಡಿದ್ದವು. ಅದರಲ್ಲೂ ಸಮಂತಾ ಋತು ಪ್ರಭು ಕುಣಿದಿದ್ದ ‘ಊಂ ಆಂಟವಾ’ ಐಟಂ ಸಾಂಗ್ ಭರ್ಜರಿ ಹಿಟ್ ಆಗಿತ್ತು.

ಇದೀಗ ಎರಡನೇ ಭಾಗದಲ್ಲೂ ಚಿತ್ರತಂಡ ಇಂತಹದ್ದೇ ಐಟಂ ಸಾಂಗ್ ಮಾಡಲು ಸಿದ್ಧತೆ ನಡೆಸಿದೆ. ಈ ಹಾಡಿಗೆ ಈ ಬಾರಿ ಸಮಂತಾ ಬದಲಿಗೆ ಶ್ರೀಲೀಲಾರನ್ನು ಹಾಕಿಕೊಳ್ಳಲು ಚಿತ್ರತಂಡ ಯೋಜನೆ ರೂಪಿಸಿತ್ತು. ಬ್ಯೂಟಿ, ಗ್ಲಾಮರ್ ಎರಡೂ ಇರುವ ಶ್ರೀಲೀಲಾ ಈ ಪಾತ್ರಕ್ಕೆ ಸೂಕ್ತ ಎಂದು ಚಿತ್ರತಂಡ ಅವರನ್ನು ಕೇಳಿಕೊಂಡಿತ್ತು.

ಆದರೆ ಶ್ರೀಲೀಲಾ ಮಾತ್ರ ಕೋಟಿ ಕೊಟ್ಟರೂ ಸದ್ಯಕ್ಕೆ ತಾನು ಐಟಂ ಹಾಡು ಮಾಡಲ್ಲ ಎಂದು ನಯವಾಗಿ ತಿರಸ್ಕರಿಸಿದ್ದಾರಂತೆ. ಈಗ ಶ್ರೀಲೀಲಾ ತೆಲುಗಿನಲ್ಲಿ ಹೀರೋಯಿನ್ ಆಗಿ ಮಿಂಚಲು ಪ್ರಾರಂಭಿಸಿದ್ದಾರೆ. ಈಗ ಐಟಂ ಸಾಂಗ್ ಮಾಡಿದರೆ ತನ್ನ ವೃತ್ತಿ ಜೀವನಕ್ಕೆ ತೊಂದರೆಯಾಗಬಹುದು ಎಂದು ಶ್ರೀಲೀಲಾ ಪುಷ್ಪ 2 ರಲ್ಲಿ ಡ್ಯಾನ್ಸ್ ಮಾಡದೇ ಇರಲು ನಿರ್ಧರಿಸಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments