ಸ್ಪಂದನಾ ವಿಜಯ್ ಅಗಲಿ ಆಗಲೇ ಒಂದು ವರ್ಷ: ವಿಜಯ್ ರಾಘವೇಂದ್ರ, ಮಗ ಶೌರ್ಯ ಪೋಸ್ಟ್ ಕಣ್ಣೀರು ತರಿಸುತ್ತದೆ

Krishnaveni K
ಮಂಗಳವಾರ, 6 ಆಗಸ್ಟ್ 2024 (11:33 IST)
ಬೆಂಗಳೂರು: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ ಅಕಾಲಿಕವಾಗಿ ಸಾವನ್ನಪ್ಪಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನಲೆಯಲ್ಲಿ ವಿಜಯ್ ಮತ್ತು ಪುತ್ರ ಶೌರ್ಯ ಭಾವುಕ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬ್ಯಾಂಕಾಕ್ ಗೆ ತೆರಳಿದ್ದ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಲ್ಲಿಯೇ ಇದ್ದಕ್ಕಿದ್ದಂತೇ ಸಾವನ್ನಪ್ಪಿದ್ದರು. ರಾತ್ರಿ ಮಲಗಿದವರು ಬೆಳಿಗ್ಗೆ ಏಳಲೇ ಇಲ್ಲ. ಅವರ ಸಾವಿಗೆ ಲೋ ಬಿಪಿ ಕಾರಣ ಎಂದು ಕೆಲವರು ಹೇಳಿದರೆ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಇನ್ನು ಕೆಲವರು ಹೇಳಿದ್ದರು.

ಆದರೆ ವಿಜಯ್ ರಾಘವೇಂದ್ರ ಮಾತ್ರ ತಮ್ಮ ಪತ್ನಿಯ ಸಾವಿನ ದುಃಖವನ್ನು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ. ಬಹುಶಃ ಆಕೆಗೇ ಏನಾಯ್ತು ಎಂದು ಗೊತ್ತಾಗಿರಲ್ಲ ಎಂದು ವಿಜಯ್ ಒಮ್ಮೆ ನೋವಿನಲ್ಲೇ ಹೇಳಿದ್ದರು. ಸ್ಪಂದನಾ ಹೋದ ಮೇಲೆ ವಿಜಯ್ ಅಕ್ಷರಶಃ ಏಕಾಂಗಿಯಾಗಿದ್ದಾರೆ. ಆದರೆ ತಮ್ಮ ಸಿನಿಮಾ, ರಿಯಾಲಿಟಿ ಶೋ ಕೆಲಸಗಳಲ್ಲಿ ತೊಡಗಿಸಿಕೊಂಡು ನೋವು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ.

ನಿನ್ನೆ ಮೊನ್ನೆ ನಡೆದಂತಿರುವ ಈ ಘಟನೆ ನಡೆದು ಆಗಲೇ ಒಂದು ವರ್ಷವಾಗಿದೆ. ಪತ್ನಿಯ ನೆನಪಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಕೆಯ ನಗುತ್ತಿರುವ ಫೋಟೋ ಹಂಚಿಕೊಂಡಿರುವ ವಿಜಯ್ ‘ಚಿನ್ನ ಮೌನದಲ್ಲಿ ಅರಳಿದ ನಗು ನಿನ್ನದು. ನೀ ನಡೆದ ಹಾದಿಯ ನೆನಪಿನ ಬೆಳಕು ನನ್ನದು’ ಎಂದು ಬರೆದುಕೊಂಡಿದ್ದಾರೆ. ಇತ್ತ ಮಗ ಶೌರ್ಯ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಅಮ್ಮನ ಜೊತೆಗಿರುವ ಫೋಟೋ ಹಂಚಿಕೊಂಡಿದ್ದು ‘ಒಂದು ವರ್ಷವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಇಬ್ಬರ ಈ ಪೋಸ್ಟ್ ಗೆ ಹಲವರು ಬೇಸರದಿಂದಲೇ ಕಾಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಮುಂದಿನ ಸುದ್ದಿ
Show comments