Select Your Language

Notifications

webdunia
webdunia
webdunia
Wednesday, 9 April 2025
webdunia

ಎಸ್ ಪಿ ಬಾಲಸುಬ್ರಮಣ್ಯಂ ಅಂತಿಮ ವಿಧಿ ವಿಧಾನ ಆರಂಭ

ಎಸ್ ಪಿ ಬಾಲಸುಬ್ರಮಣ್ಯಂ
ಚೆನ್ನೈ , ಶನಿವಾರ, 26 ಸೆಪ್ಟಂಬರ್ 2020 (10:34 IST)
ಚೆನ್ನೈ: ನಿನ್ನೆ ಇಹಲೋಕ ತ್ಯಜಿಸಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಅಂತಿಮ ಕ್ರಿಯೆಯ ವಿಧಿ ವಿಧಾನಗಳು ಆರಂಭವಾಗಿದೆ.

 

ಪುತ್ರ ಎಸ್ ಪಿ ಚರಣ್ ಪುರೋಹಿತರ ಮಾರ್ಗದರ್ಶನದಂತೆ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅವರ ನಿವಾಸದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸುತ್ತಿದ್ದಾರೆ. ಇದಾದ ಬಳಿಕ ಫಾರಂ ಹೌಸ್ ಗೆ ಅಂತಿಮ ಯಾತ್ರೆ ನಡೆಯಲಿದ್ದು, ಅಲ್ಲಿ ಅವರ ಸಮಾಧಿ ನಡೆಸಲಾಗುವುದು. ಈಗಾಗಲೇ ಫಾರಂ ಹೌಸ್ ನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಅವರ ಫಾರಂ ಹೌಸ್ ನಲ್ಲಿಯೂ ತಮ್ಮ ಮೆಚ್ಚಿನ ಗಾಯಕನ ಅಂತಿಮ ದರ್ಶನಕ್ಕಾಗಿ ಅಭಿಮಾನಿಗಳ ಸಮೂಹವೇ ನೆರೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ನಟಿಗಾಗಿ RRR ಸಿನಿಮಾ ಯೋಜನೆ ಬದಲಿಸಿದ ನಿರ್ದೇಶಕ ರಾಜಮೌಳಿ