ರಾಜಕೀಯ ಕಿತ್ತಾಟದಲ್ಲಿ ಗಾಯಕ ವಿಜಯ್ ಪ್ರಕಾಶ್ ಗೆ ಅವಮಾನ

Webdunia
ಶುಕ್ರವಾರ, 10 ಜನವರಿ 2020 (08:58 IST)
ಬೆಂಗಳೂರು: ಆನೆಗುಂದಿ ಉತ್ಸವದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಗೆ ಅವಮಾನ ಮಾಡಲಾಗಿದೆ. ಸನ್ಮಾನ ಮಾಡುವ ವಿಚಾರದಲ್ಲಿ ರಾಜಕೀಯ ನಾಯಕರ ಕಿತ್ತಾಟದಲ್ಲಿ ಖ್ಯಾತ ಗಾಯಕನನ್ನು ಅವಮಾನಿಸಲಾಗಿದೆ.


ಆನೆಗುಂದಿ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಬಂದಿದ್ದ ವಿಜಯ್ ಪ್ರಕಾಶ್ ಗೆ ಸನ್ಮಾನ ಏರ್ಪಡಿಸಲು ನಿರ್ಧರಿಸಲಾಗಿತ್ತು. ಬಿಜೆಪಿ ಶಾಸಕ ಮುನಳ್ಳಿ ಪರಣ್ಣ ಸನ್ಮಾನ ಮಾಡುವುದೆಂದು ನಿಗದಿಯಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಶಾಸಕರು ಬಾರದೇ ಹೋಗಿದ್ದರಿಂದ ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.

ಬಳಿಕ ವಿಜಯ್ ಪ್ರಕಾಶ್ ಹಾಡಿನ ಕಾರ್ಯಕ್ರಮ ಶುರು ಮಾಡಿದ್ದರು. ಈ ವೇಳೆ ಆಗಮಿಸಿದ ಶಾಸಕ ಮುನಳ್ಳಿಗೆ ಸನ್ಮಾನ ನಡೆದಿರುವುದು ಗೊತ್ತಾಗಿ ರಂಪಾಟ ಮಾಡಿದ್ದಾರೆ. ಒಂದೆಡೆ ವಿಜಯ್ ಪ್ರಕಾಶ್ ವೇದಿಕೆಯಲ್ಲಿ ಹಾಡುತ್ತಿದ್ದರೆ ಇನ್ನೊಂದೆಡೆ ಮುನಳ್ಳಿ ಪರಣ್ಣ ಆಯೋಜಕರ ಜತೆ ವಾಗ್ವಾದ ನಡೆಸುತ್ತಿದ್ದರು. ಈ ವಾಗ್ವಾದವನ್ನು ವೇದಿಕೆಯಿಂದಲೇ ನೋಡಿದ ವಿಜಯ್ ಪ್ರಕಾಶ್ ಶಾಸಕರ ಬಳಿ ಬಂದು ತಾವೇ ಅವರನ್ನು ಸಮಾಧಾನಿಸಿ ವೇದಿಕೆ ಕರೆದುಕೊಂಡು ಬಂದಿದ್ದಲ್ಲದೆ, ಎರಡನೇ ಬಾರಿ ಸನ್ಮಾನ ಮಾಡಿಸಿದರು!

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ದೇವರ ಮಕ್ಕಳಿಗೆ ದೀಪಾವಳಿಗೆ ಸರ್ಪ್ರೈಸ್ ನೀಡಿದ ಸಮಂತಾ ರುತ್ ಪ್ರಭು

ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ: ದೀಪಾವಳಿ ದಿನ ಗುಡ್‌ನ್ಯೂಸ್ ಹಂಚಿಕೊಂಡ ರಶ್ಮಿ ಪ್ರಭಾಕರ್

ಕಾಂತಾರ ಸಕ್ಸನ್‌ ಬೆನ್ನಲ್ಲೇ ಬಿಹಾರದ ಪವರ್‌ಫುಲ್‌ ದೇಗುಲಕ್ಕೆ ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಭೇಟಿ

ಮೊದಲ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ

ಮುಂದಿನ ಸುದ್ದಿ
Show comments