Publish Date: Wed, 08 Nov 2023 (16:48 IST)
Updated Date: Wed, 08 Nov 2023 (17:03 IST)
Photo Courtesy: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಹಲವು ಹಿಟ್ ಹಾಡುಗಳಿಗೆ ರಾಗ ಸಂಯೋಜಿಸಿರುವ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಸದ್ಯದಲ್ಲೇ ಮದುವೆಯಾಗಲಿದ್ದಾರಂತೆ.
ಯೂ ಟ್ಯೂಬ್ ಸಂದರ್ಶನವೊಂದರ ವೇಳೆ ನಟಿ ತಾರಾ ಅಚಾನಕ್ ಆಗಿ ವಾಸುಕಿ ಅವರ ಎದುರೇ ಅವರು ಮುಂದಿನ ತಿಂಗಳು ಮದುವೆಯಾಗಲಿದ್ದಾರೆ ಎಂದು ಬಾಯ್ಬಿಟ್ಟಿದ್ದಾರೆ. ಆಗ ಅವರು ಇದುವರೆಗೆ ಅವರು ರಿವೀಲ್ ಮಾಡಿಲ್ಲ ಎಂದು ಹೇಳಿದ್ದಾರೆ.
ಹೀಗಾಗಿ ವಾಸುಕಿ ಸದ್ಯದಲ್ಲೇ ಮದುವೆಯಾಗಲಿರುವುದಂತೂ ಪಕ್ಕಾ ಆಗಿದೆ. ಆದರೆ ಹುಡುಗಿ ಯಾರು ಎಂದು ಬಹಿರಂಗಪಡಿಸಿಲ್ಲ. ಇದೀಗ ಸ್ವತಃ ವಾಸುಕಿಯೇ ಅಧಿಕೃತವಾಗಿ ತಮ್ಮ ಮದುವೆ ಸುದ್ದಿ ಬಗ್ಗೆ ಹೇಳಿಕೆ ನೀಡಬೇಕಿದೆ.