ಗಾಯಕಿ ಅಖಿಲಾ ಪಜಿಮಣ್ಣು ದಾಂಪತ್ಯ ಮುರಿದು ಬಿತ್ತು: ಕಾರಣವೇನು

Krishnaveni K
ಶುಕ್ರವಾರ, 20 ಜೂನ್ 2025 (08:47 IST)
Photo Credit: Instagram
ಬೆಂಗಳೂರು: ಕನ್ನಡ ಕೋಗಿಲೆ ಖ್ಯಾತಿಯ ಖ್ಯಾತ ಗಾಯಕಿ ಅಖಿಲಾ ಪಜಿಮಣ್ಣು ಮತ್ತು ಪತಿ ಧನಂಜಯ್ ಶರ್ಮಾ ದಾಂಪತ್ಯ ಜೀವನ ಮುರಿದುಬಿದ್ದಿದೆ. ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ.
 

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಅಖಿಲಾ ಪಜಿಮಣ್ಣು ಅಮೆರಿಕಾದಲ್ಲಿ ವೃತ್ತಿಯಲ್ಲಿರುವ ಎಂಬಿಎ ಪದವೀಧರ ಧನಂಜಯ್ ಶರ್ಮಾ ಜೊತೆ 2022 ರಲ್ಲಿ ವಿವಾಹವಾಗಿದ್ದರು. ವಿವಾಹ ನಂತರ ಕೆಲವು ಸಮಯ ಅಖಿಲಾ ಅಮೆರಿಕಾದಲ್ಲೇ ನೆಲೆಸಿದ್ದರು.

ಪ್ರಸ್ತುತ ಅವರು ತಾಯ್ನಾಡಿಗೆ ಮರಳಿದ್ದರು. ಖಾಸಗಿ ವಾಹಿನಿಗಳಲ್ಲಿ ಆಂಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಅಖಿಲಾ ವಿಚ್ಛೇದನ ಸುದ್ದಿ ಕೇಳಿಬರುತ್ತಿದೆ. ಇಬ್ಬರೂ ಪರಸ್ಪರ ರೀಲ್ಸ್ ಪ್ರಕಟಿಸುತ್ತಾ, ಟ್ರಿಪ್ ಗೆ ಹೋಗುವಂತಹ ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ಇಬ್ಬರ ನಡುವಿನ ಬಾಂಧವ್ಯವನ್ನು ತೋರಿಸಿಕೊಳ್ಳುತ್ತಿದ್ದರು.

ಆದರೆ ಈಗ ಅಖಿಲಾ ವಿಚ್ಛೇದನ ಸುದ್ದಿ ಶಾಕಿಂಗ್ ಆಗಿದೆ. ಜೂನ್ 11 ರಂದು ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಪುತ್ತೂರು ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಪರಸ್ಪರ ಹೊಂದಾಣಿಕೆಗೆ ಅವಕಾಶ ನೀಡಲು ಇಚ್ಛಿಸಿದರೂ ಇಬ್ಬರೂ ಜೊತೆಯಾಗಿ ಇರಲು ಸಾಧ್ಯವೇ ಇಲ್ಲ ಎಂದು ಕೋರ್ಟ್ ಗೆ ಮನವರಿಕೆ ಮಾಡಿರುವ ಕಾರಣಕ್ಕೆ ಕೋರ್ಟ್ ವಿಚ್ಛೇದನಕ್ಕೆ ಒಪ್ಪಿದೆ. ಇಂದು ಇವರ ವಿಚ್ಛೇದನ ತೀರ್ಪು ಪ್ರಕಟವಾಗಲಿದೆ. ಅದಾದ ಬಳಿಕ ಧನಂಜಯ್ ಅಮೆರಿಕಾಗೆ ತೆರಳಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್‌ಬಾಸ್‌ನಿಂದ ಬಂದ್ಮೇಲೆ ಹೊಸ ಅಧ್ಯಾಯ ಶುರು ಮಾಡಿದ ಉಗ್ರಂ ಮಂಜು

ಸಮಂತಾ ಲವ್‌ನಲ್ಲಿ ಬಿದ್ದಿರುವುದು ಪಕ್ಕಾ ಎಂದ ಅಭಿಮಾನಿಗಳು

ಇದು, ಇದು actually ಚೆನ್ನಾಗಿರೋದು, ಕಿಚ್ಚ ಬಿಚ್ಚಿಟ್ಟ ಅಸಲಿಗೆ ಪ್ರೇಕ್ಷಕರೂ ಫುಲ್ ಖುಷ್‌

ಅಣ್ಣನಿಗೆ ಹೃದಯಾಘಾತ, ಬೆಂಗಳೂರಿಗೆ ಬಂದು ಆರೋಗ್ಯ ವಿಚಾರಿಸಿದ ನಟ ರಜನಿಕಾಂತ್

ಬೆಂಗಳೂರಿನಲ್ಲಿ ಕಾಂತಾರ ಚಾಪ್ಟರ್ 1 ಸಕ್ಸಸ್‌ ಮೀಟ್‌: ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದ ಚಿತ್ರತಂಡ

ಮುಂದಿನ ಸುದ್ದಿ
Show comments