Publish Date: Sat, 10 Mar 2018 (11:44 IST)
Updated Date: Sat, 10 Mar 2018 (11:51 IST)
ಬೆಂಗಳೂರು : ಬಹುಭಾಷಾ ನಟಿ ಸಿಂಧೂ ಮೆನನ್ ಅವರು ಬೆಂಗಳೂರಿನ ಬ್ಯಾಂಕ್ ಆಫ್ ಬರೋಡಾಗೆ ವಂಚನೆ ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ.
ಆರು ತಿಂಗಳ ಹಿಂದೆ ಸಿಂಧೂ ಮೆನನ್ ಅವರು ಬೆಂಝ್ ಕಾರು ಖರೀದಿಸೋದಾಗಿ ಬ್ಯಾಂಕ್ ಗೆ ನಕಲಿ ದಾಖಲೆಗಳನ್ನು ನೀಡಿ 36 ಲಕ್ಷ ರೂ. ಸಾಲ ಪಡೆದು ವಂಚನೆ ಮಾಡಿದ್ದಾರೆ. ಈ ಕೆಲಸಕ್ಕೆ ಅವರ ಸಹೋದರ ಮನೋಜ್ ಹಾಗೂ ಆತನ ಪ್ರಿಯತಮೆ ನಾಗಶ್ರೀ ಸಾಥ್ ನೀಡಿದ್ದಾರೆ. ಈಗ ದಾಖಲೆಗಳನ್ನು ಪರಿಶೀಲಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್ ದಾಖಲಿಸಿಕೊಂಡ ಆರ್.ಎಂ.ಸಿ ಯಾರ್ಡ್ ಪೊಲೀಸರು ಸಿಂಧೂ ಅವರ ಸಹೋದರನನ್ನು ಬಂಧಿಸಿದ್ದು, ಸಿಂಧೂ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ