Publish Date: Tue, 06 Jun 2023 (08:40 IST)
Updated Date: Tue, 06 Jun 2023 (08:50 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ. ಕನ್ನಡದ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ಎನಿಸಿಕೊಂಡಿರುವ ರಕ್ಷಿತ್ ತಮ್ಮ ಕಿರು ಸಿನಿ ಕೆರಿಯರ್ ನಲ್ಲೇ ಕ್ರಿಯಾತ್ಮಕ, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದವರು.
40 ನೇ ವರ್ಷಕ್ಕೆ ಕಾಲಿಟ್ಟ ರಕ್ಷಿತ್ ಶೆಟ್ಟಿ 2010 ರಲ್ಲಿ ನಮ್ ಏರಿಯಾಲ್ ಒಂದು ದಿನ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. ಆದರೆ ಅವರಿಗೆ ಬ್ರೇಕ್ ಕೊಟ್ಟಿದ್ದು ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಸಿನಿಮಾ. ಬಳಿಕ ಉಳಿದವರು ಕಂಡಂತೆ ಅವರಿಗೆ ಖ್ಯಾತಿ ತಂದುಕೊಟ್ಟಿತು.
ಇದಾದ ಬಳಿಕ ವಾಸ್ತು ಪ್ರಕಾರ, ಗೋದಿ ಬಣ್ಣ ಸಾಧಾರಣ ಮೈಕಟ್ಟು, ರಿಕಿ, ಕಿರಿಕ್ ಪಾರ್ಟಿ, 777 ಚಾರ್ಲಿ ಅವರ ಕೆರಿಯರ್ ನ ಹಿಟ್ ಸಿನಿಮಾಗಳಾಯಿತು. ಈ ನಡುವೆ ಪರಂವಾ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆ ಮೂಲಕ ಹೊಸಬರ ಸಿನಿಮಾಗಳಿಗೂ ಬಂಡವಾಳ ಹಾಕುತ್ತಿದ್ದಾರೆ. ಇದೀಗ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಶೂಟಿಂಗ್ ಮುಗಿಸಿರುವ ರಕ್ಷಿತ್ ರಿಚರ್ಡ್ ಆಂಟನಿ ಸಿನಿಮಾ ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.