Select Your Language

Notifications

webdunia
webdunia
webdunia
webdunia

ಸಿಂಪಲ್ ಆಗಿ ಒಂದು ಲವ್ ಸ್ಟೋರಿ, ಅನುಕ್ತಾ, ಮತ್ತು ಈಗ ಮೈಸೂರು ಮಸಾಲಾ

ಸಿಂಪಲ್ ಆಗಿ ಒಂದು ಲವ್ ಸ್ಟೋರಿ, ಅನುಕ್ತಾ, ಮತ್ತು ಈಗ ಮೈಸೂರು ಮಸಾಲಾ
ಬೆಂಗಳೂರು , ಸೋಮವಾರ, 30 ಜುಲೈ 2018 (15:51 IST)
ಸ್ಯಾಂಡಲ್‍ವುಡ್ ಚಿತ್ರವಲಯದಲ್ಲಿ ಸೈ-ಫೈ ಚಿತ್ರಗಳು ಹೆಚ್ಚು ಆವಿಷ್ಕಾರಕ್ಕೊಳಗಾಗದ ಕ್ಷೇತ್ರವಾಗಿದೆ. ಆ ಕುರಿತು ಮಾಹಿತಿ ಇಲ್ಲಿದೆ.
ಕನ್ನಡ ಚಿತ್ರರಂಗದಲ್ಲಿ "ಸಿಂಪಲ್ ಆಗಿ ಒಂದು ಲವ್ ಸ್ಟೋರಿ" ಹಾಗೂ ಥ್ರಿಲ್ಲರ್ ಚಿತ್ರ "ಅನುಕ್ತಾ"ಗಂತಹ ಚಿತ್ರಗಳಿಗೆ ಕೆಲಸ ಮಾಡಿರುವ ಛಾಯಾಗ್ರಾಹಕ ಮನೋಹರ್ ಜೋಷಿಅವರು ತಮ್ಮ 14 ವರ್ಷದ ವೃತ್ತಿ ಬದುಕಿನಲ್ಲಿ ಪ್ರೇಕ್ಷಕರಿಗೆ ಅತ್ಯತ್ತಮ ಕೊಡುಗೆಯನ್ನೇ ನೀಡುತ್ತಾ ಬಂದಿದ್ದಾರೆ. ಇವರು, ಸ್ಯಾಂಡಲ್‍ವುಡ್‍ನ ಖ್ಯಾತ ನಟರಾದ ಗಣೇಶ್, ಶ್ವೇತಾಶ್ರೀವಾತ್ಸವ್, ರಕ್ಷಿತ್ ಕುಶಾಲ್ ಮತ್ತಿತರರ ಜೊತೆ ಕೆಲಸ ಮಾಡಿದ್ದಾರೆ.
webdunia
ಸದ್ಯ ಮನೋಹರ್ ಜೋಶಿ ಅವರು ನಗರದಲ್ಲಿ ಸುದ್ದಿ ಮಾಡುತ್ತಿರುವ, ಹೆಚ್ಚು ವಿಸ್ತಾರ ಹಾಗೂ ಶಕ್ತಿಯುತ ಚಿತ್ರ ಮೈಸೂರು ಮಸಾಲಾ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿಸಂಯುಕ್ತ ಹೊರನಾಡು, ಅನಂತನಾಗ್, ಪ್ರಕಾಶ್ ಬೆಳವಾಡಿ ಮತ್ತಿತರರು ತಾರಾಂಗಣದಲ್ಲಿದ್ದಾರೆ. ಜೋಷಿ ಅವರ ಪ್ರಕಾರ ಸೈ-ಫೈ ಚಿತ್ರದ ಛಾಯಾಗ್ರಹಣ ಸಾಕಷ್ಟುಸವಾಲಿನದ್ದಾಗಿತ್ತಾದರೂ, ಚಿತ್ರವನ್ನು ಪ್ರೇಕ್ಷಕರ ಮನಮುಟ್ಟುವಂತೆ ನೀಡುವುದು ಇನ್ನೊಂದು ಸವಾಲು. ಈ ಚಿತ್ರದ ಮೂಲಕ ಜನರಿಗೆ ವಿನೂತನ ಚಿತ್ರವೊಂದನ್ನು ನೋಡಲುದೊರೆಯುತ್ತದೆ ಎಂಬುದು ಅವರ ಅಭಿಮತ.
 
ಈ ಮಾಹಿತಿ ನಿಮಗೂ ಆಸಕ್ತಿದಾಯಕವಾಗಿದ್ದಲ್ಲಿ, ಆ ವ್ಯಕ್ತಿಯೊಂದಿಗೆ ವೈಯಕ್ತಿಕ ಸಂವಾದಕ್ಕೆ ಅವಕಾಶ ಕಲ್ಪಿಸಲಾಗುವುದು ಸಂಸ್ಥೆಯ ಆಯೋಜಕರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ತನ್ನ ಸೌಂದರ್ಯದ ರಹಸ್ಯ ಬಿಚ್ಚಿಟ್ಟ ನಟಿ ಸುಮನ್ ರಂಗನಾಥ್