Select Your Language

Notifications

webdunia
webdunia
webdunia
webdunia

ಕಬ್ಜ ಸಿನಿಮಾಗೆ ಹೀರೋಯಿನ್ ಫಿಕ್ಸ್: ಮತ್ತೆ ಕನ್ನಡಕ್ಕೆ ಬಂದ ದಕ್ಷಿಣ ಭಾರತದ ಸುಂದರಿ

ಕಬ್ಜ ಸಿನಿಮಾಗೆ ಹೀರೋಯಿನ್ ಫಿಕ್ಸ್: ಮತ್ತೆ ಕನ್ನಡಕ್ಕೆ ಬಂದ ದಕ್ಷಿಣ ಭಾರತದ ಸುಂದರಿ
ಬೆಂಗಳೂರು , ಸೋಮವಾರ, 7 ಮಾರ್ಚ್ 2022 (17:31 IST)
ಬೆಂಗಳೂರು: ರಿಯಲ್ ‍ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾಗೆ ನಾಯಕಿ ಯಾರೆಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕಬ್ಜ ಸಿನಿಮಾಗೆ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರ ಆಗಮನವಾಗಲಿದೆ ಎಂಬ ರೂಮರ್ ಗಳಿದ್ದವು. ಅದೀಗ ನಿಜವಾಗಿದೆ.

ಟಾಲಿವುಡ್ ಬೆಡಗಿ ಶ್ರಿಯಾ ಸರಣ್ ಕಬ್ಜ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ ಅಧಿಕೃತವಾಗಿ ನಾಯಕಿ ಯಾರೆಂಬ ಗುಟ್ಟು ಬಿಟ್ಟುಕೊಟ್ಟಿದೆ.

ಶ್ರಿಯಾ ಈ ಹಿಂದೆ ಪುನೀತ್ ರಾಜ್ ಕುಮಾರ್ ಅವರ ಅರಸು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಕನ್ನಡದಲ್ಲಿ ಅಭಿನಯಿಸುತ್ತಿದ್ದಾರೆ. ಕಬ್ಜ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೇಮ್ಸ್ ಕಾರ್ಯಕ್ರಮದಲ್ಲಿ ಪುನೀತ್ ನೆನೆದು ಕಣ್ಣೀರು ಹಾಕಿದ ಶಿವರಾಜ್ ಕುಮಾರ್