Select Your Language

Notifications

webdunia
webdunia
webdunia
webdunia

ರಾಣಿ ಪದ್ಮಾವತಿ ಸಿನಿಮಾದ ಮೊದಲ ಹಾಡು ಹಾಡಿದ ಶ್ರೇಯಾ ಘೋಷಾಲ್

ರಾಣಿ ಪದ್ಮಾವತಿ ಸಿನಿಮಾದ ಮೊದಲ ಹಾಡು ಹಾಡಿದ ಶ್ರೇಯಾ ಘೋಷಾಲ್
, ಬುಧವಾರ, 13 ಜುಲೈ 2016 (09:25 IST)
ಸಂಜಯ್ ಲೀಲಾ ಬನ್ಸಾಲಿ ಅವರ ರಾಣಿ ಪದ್ಮಾವತಿ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಅನ್ನೋದು ಖಚಿತವಾಗಿತ್ತು. ಹೀಗಿರುವಾಗಲೇ ಸಿನಿಮಾದ ಕೆಲಸಗಳು ಭರ್ಜರಿಯಾಗಿಯೇ ನಡೆಯುತ್ತಿವೆ ಅನ್ನೋದು ಕೂಡ ಖಚಿತವಾಗಿದೆ. ಅದಕ್ಕೆ ಸಾಕ್ಷಿ ಸಿನಿಮಾದ ಹಾಡುಗಳ ರೆಕಾರ್ಡಿಂಗ್ ಆಗುತ್ತಿರೋದು.

ಹೌದು... ರಾಣಿ ಪದ್ಮಾವತಿ ಸಿನಿಮಾದ ಹಾಡೊಂದರ ರೆಕಾರ್ಡಿಂಗ್ ಈಗಾಗಲೇ ಕಂಪ್ಲೀಟ್ ಆಗಿದೆಯಂತೆ. ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರು ಸಿನಿಮಾದ ಹಾಡೊಂದನ್ನು ಹಾಡಿದ್ದಾರೆ. ಈ ಹಿಂದೆ ರಿಲೀಸ್ ಆದ ಬನ್ಸಾಲಿ ಅವರ ಬಾಜೀರಾವ್ ಮಸ್ತಾನಿ ಸಿನಿಮಾದ ಹಾಡುಗಳು ಹಾಗೇ ರಾಮ್ ಲೀಲಾ ಸಿನಿಮಾದ ಹಾಡುಗಳು ತುಂಬಾನೇ ಹಿಟ್ ಆಗಿದ್ದವು. ಇದೀಗ ರಾಣಿ ಪದ್ಮಾವತಿ ಸಿನಿಮಾದ ಹಾಡುಗಳ ಬಗ್ಗೆಯೂ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ. ಅದರಂತೆ ಸಿನಿಮಾದ ಮೊದಲ ಹಾಡನ್ನು ಸಂಜಯ್ ಲೀಲಾ ಬನ್ಸಾಲಿ ಅವರ ಫೇವರೇಟ್ ಗಾಯಕಿ ಶ್ರೇಯಾ ಘೋಷಾಲ್ ಅವರು ಹಾಡಿ ಮುಗಿಸಿದ್ದಾರಂತೆ.
 
ಇನ್ನು ಈ ಸಿನಿಮಾದಲ್ಲಿ ಇನ್ನು ಅನೇಕ ಗಾಯಕರು ಹಾಡಲಿದ್ದಾರಂತೆ. ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ರಾಣಿ ಪದ್ಮಾವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ರಣ್ ವೀರ್ ಸಿಂಗ್ ಸಿನಿಮಾದ ನಾಯಕನಾಗಿ ಅಭಿನಯಿಸುವ ಸಾಧ್ಯತೆ ಇದೆ. ಇನ್ನುಳಿದ ತಾರಾಗಣದ ಬಗ್ಗೆ ಇದುವರೆಗೂ ಮಾಹಿತಿ ಹೊರ ಬಿದ್ದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜರಥ "ಅಧಿಕೃತ ಫಸ್ಟ್ ಲುಕ್ ಟೀಸರ್ "(ವಿಡಿಯೋ)