ಕಳೆದ ವರ್ಷ ರಿಲೀಸ್ ಆದ ಕನ್ನಡ ಸೂಪರ್ ಹಿಟ್ ಸಿನಿಮಾ ರಂಗಿತರಂಗ ಸಿನಿಮಾ ರಿಲೀಸ್ ಆಗಿ ಒಂದು ವರ್ಷವಾದ್ರು, ಇನ್ನೂ ಪ್ರದರ್ಶನ ಕಾಣುತ್ತಲೇ ಇದೆ. ಮತ್ತೆ ಮತ್ತೆ ರಂಗಿತರಂಗ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಹೀಗಿರುವಾಗಲೇ ಸಿನಿಮಾ ತಂಡ ಅಭಿಮಾನಿಗಳಿಗೆ ಬಂಪರ್ ಉಡುಗೊರೆಯೊಂದನ್ನು ನೀಡಿದ್ದಾರೆ.
ತಮ್ಮ ಮುಂದಿನ ಸಿನಿಮಾದ ಹೆಸರನ್ನು ಘೋಷಿಸಿದ್ದಾರೆ.ಹೌದು... ಈ ಹಿಂದೆ ಸಿನಿಮಾದ ನಿರ್ದೇಶಕರಾದ ಅನೂಪ್ ಭಂಡಾರಿ ಅವರು ರಂಗಿತರಂಗ ಸಿನಿಮಾ ರಿಲೀಸ್ ಆದ ದಿನ ಅಂದ್ರೆ ಜುಲೈ 8 ರಂದು ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ನೀಡುತ್ತೇವೆ ಅಂತಾ ಹೇಳಿದ್ದರು. ಆದ್ರೆ ಬಳಿಕ ಕಾರಣಾಂತರಗಳಿಂದ ಸಿನಿಮಾದ ಅದನ್ನು ಮುಂದಕ್ಕೆ ಹಾಕಿದ್ದರು. ಆದ್ರೆ ಜುಲೈ 10 ರಂದು ಭಾನುವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ರವಿಚಂದ್ರನ್ ಹಾಗೂ ನಟಿ ಜೂಹಿ ಚಾವ್ಲಾ ಅವರಿಂದ ಸಿನಿಮಾ ತಂಡ ತನ್ನ ಮುಂದಿನ ಸಿನಿಮಾ ರಾಜರಥ ಹೆಸರನ್ನು ಲಾಂಚ್ ಮಾಡ್ತು.
ಆ ಮೂಲಕ ಅಭಿಮಾನಿಗಳ ಬಹು ದಿನಗಳ ಕಾಯುವಿಕೆಗೆ ಉತ್ತರ ನೀಡಿತು.ಈ ಸಿನಿಮಾವನ್ನು ಕೂಡ ಅನೂಪ್ ಭಂಡಾರಿ ಅವರೇ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ರಂಗಿತರಂಗ ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದು ನಿರೂಪ್ ಹಾಗೂ ಅವಂತಿಕಾ ಶೆಟ್ಟಿ ಅವರೇ ಈ ಸಿನಿಮಾದಲ್ಲೂ ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ರಂಗಿತರಂಗದಲ್ಲಿ ನಟಿಸಿದ್ದ ಸಾಯಿ ಕುಮಾರ್ ಸಹೋದರ ರವಿಶಂಕರ್ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅನೂಪ್ ಭಂಡಾರಿ ಅವರೇ ಸಿನಿಮಾಕ್ಕೆ ಸಂಗೀತ ಹಾಗೂ ಸಾಹಿತ್ಯದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸಿನಿಮಾದ ಕಥೆಯ ಬಗ್ಗೆ ಮಾತ್ರ ಇನ್ನು ಮಾಹಿತಿ ಹೊರ ಬಿದ್ದಿಲ್ಲ.
ಇಲ್ಲಿದೆ ನೋಡಿ ರಾಜರಥ "ಅಧಿಕೃತ ಫಸ್ಟ್ ಲುಕ್ ಟೀಸರ್ "(ವಿಡಿಯೋ)