Select Your Language

Notifications

webdunia
webdunia
webdunia
webdunia

“ಚೌಕಾಭಾರಾ” ಕಿರು ಚಿತ್ರಕ್ಕೆ ರಾಜ್ಯ ಪ್ರಶಸ್ತಿ

“ಚೌಕಾಭಾರಾ” ಕಿರು ಚಿತ್ರಕ್ಕೆ ರಾಜ್ಯ ಪ್ರಶಸ್ತಿ

ಕೃಷ್ಣವೇಣಿ ಕೆ

Bangalore , ಭಾನುವಾರ, 23 ಅಕ್ಟೋಬರ್ 2016 (10:07 IST)
ಬೆಂಗಳೂರು:  ನೀನಾಸಂ ಸತೀಶ್ ಅವರ ಸತೀಶ್ ಪಿಕ್ಚರ್ ಹೌಸ್ ನಿರ್ಮಾಣದಲ್ಲಿ ತಯಾರಾದ ಚೌಕಾಭಾರ ಎನ್ನುವ ಕನ್ನಡ ಕಿರು ಚಿತ್ರಕ್ಕೆ 2015 ನೇ ಸಾಲಿನ ಅತ್ಯುತ್ತಮ ಕಿರು ಚಿತ್ರವೆಂಬ ರಾಜ್ಯ ಪ್ರಶಸ್ತಿ ಲಭಿಸಿದೆ.

ಕಿರು ಚಿತ್ರ ಎಂದರೆ ಎಲ್ಲೋ ಯೂ ಟ್ಯೂಬ್ ನಲ್ಲಿ ಬಂದು ಹೋಗುವ ಚಿತ್ರ ಎಂದುಕೊಳ್ಳಬೇಡಿ. ಇದು ರಾಜ್ಯಾದ್ಯಂತೆ 50 ಕ್ಕೂ ಹೆಚ್ಚು ಪ್ರದರ್ಶನ ಕಂಡ ಕಿರು ಚಿತ್ರ. ಮೊದಲ ಬಾರಿಗೆ ಕನ್ನಡ ಕಿರು ಚಿತ್ರವೊಂದು ಥಿಯೇಟರ್ ನಲ್ಲಿ ಪ್ರದರ್ಶನ ಕಂಡ ದಾಖಲೆಯನ್ನೂ ಮಾಡಿತ್ತು.

ಚಿತ್ರದ ಪ್ರಮುಖ ಪಾತ್ರಧಾರಿ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಚಿರಪರಿಚಿತರಾಗಿರುವ ಅಚ್ಯುತ್ ರಾವ್, ಶರತ್ ಲೋಹಿತಾಶ್ವ. ಇವರ ಜತೆಗೆ ಅಶ್ವಿನಿ ಗೌಡ, ನಂದಿನಿ ಪಟವರ್ಧನ್, ಕಿರಣ್ ನಾಯಕ್, ಮಂಜುನಾಥ್ ಹೆಗ್ಡೆ ಕೂಡಾ ಅಭಿನಯಿಸಿದ್ದಾರೆ. ರಘು ಶಿವಮೊಗ್ಗ ಚಿತ್ರದ ನಿರ್ದೇಶಕರು. ಆಶ್ಲೇ ಮೆಂಡೋನ್ಸಾ ಸಂಗೀತವಿದೆ.

“ಮಾನಸಿಕ ಒತ್ತಡ ಎನ್ನುವುದು ಮನುಷ್ಯನ ಜೀವನದಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ. ಅವನನ್ನು ಯಾವ ಹಂತಕ್ಕೆ ತಲುಪಿಸುತ್ತದೆ ಎನ್ನುವುದು ಈ ಕಿರು ಚಿತ್ರದ ಸಾರಾಂಶ” ಎಂದಿದ್ದಾರೆ ನಿರ್ದೇಶಕ ರಘು ಶಿವಮೊಗ್ಗ. 

ಸಾಮಾನ್ಯವಾಗಿ ಕಿರು ಚಿತ್ರಗಳನ್ನು ಅದರಲ್ಲೂ ವಿಶೇಷವಾಗಿ ಕನ್ನಡ ಕಿರು ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಕಡಿಮೆ ಇರುವಾಗ ಇದನ್ನು ಯೂ ಟ್ಯೂಬ್ ನಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ ಎನ್ನುವುದು ವಿಶೇಷ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ 2 ಟ್ರೇಲರ್ ಬಿಡುಗಡೆ