Publish Date: Sun, 23 Oct 2016 (09:56 IST)
Updated Date: Sun, 23 Oct 2016 (11:25 IST)
ಮುಂಬೈ: ಬಹು ನಿರೀಕ್ಷಿತ ಚಿತ್ರ ಬಾಹುಬಲಿ ಭಾಗ 2ರ ಟ್ರೇಲರ್ ಬಿಡುಗಡೆಯಾಗಿದೆ. ಮುಂಬೈ ಅಕಾಡಮಿ ಆಫ್ ಮೂವಿಂಗ್ ಇಮೇಜಸ್ ನಲ್ಲಿ ಅಂತಿಮ ಭಾಗವನ್ನು ಬಿಡುಗಡೆಗೊಳಿಸಲಾಗಿದೆ.
ಚಿತ್ರದ ನಿರ್ದೇಶಕ ರಾಜಮೌಳಿ ಮತ್ತು ಅವರ ತಂಡ ವೀಕ್ಷಕರಿಗೆ ಬಾಹುಬಲಿಯ ಇನ್ನೊಂದು ಭಾಗವನ್ನು ತೆರೆದಿಟ್ಟಿದ್ದು, ವೀಕ್ಷಕರನ್ನು ತುದಿಗಾಲಲ್ಲಿಡುವಂತೆ ಮಾಡಿದೆ. ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಮೊದಲನೇ ಭಾಗದಲ್ಲಿ ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಪ್ರಶ್ನೆಗೆ ಈ ಭಾಗದಲ್ಲಿ ರಾಜಮೌಳಿ ಉತ್ತರಿಸಲಿದ್ದಾರೆ. ಅಲ್ಲದೆ ಕಿರಿಯ ಬಾಹುಬಲಿ ತನ್ನ ಹೆತ್ತವರಿಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕತೆಯೂ ಇದರಲ್ಲಿ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ