Select Your Language

Notifications

webdunia
webdunia
webdunia
webdunia

ಕಾಲಿವುಡ್​ಗೆ ಶಾಕ್​: ಸೂಪರ್‌ ಹಿಟ್‌ ಸಿನಿಮಾಗಳ ನಿರ್ಮಾಪಕ ದಿಲ್ಲಿಬಾಬು ಮೃತ್ಯು

Tamil Producer Dillibabu

Sampriya

ಚೆನ್ನೈ , ಸೋಮವಾರ, 9 ಸೆಪ್ಟಂಬರ್ 2024 (15:22 IST)
Photo Courtesy X
ಚೆನ್ನೈ: ಖ್ಯಾತ ತಮಿಳು ನಿರ್ಮಾಪಕ ದಿಲ್ಲಿಬಾಬು (50) ಇಂದು ಮೃತಪಟ್ಟಿದ್ದಾರೆ. ಮಧ್ಯರಾತ್ರಿ 12:30ರ ಸಮಯಕ್ಕೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಪೆರಂಬದೂರ್​ನ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

 ಅವರು ತಮಿಳು ಇಂಡಸ್ಟ್ರಿಯಲ್ಲಿ ರಾಕ್ಷಸನ್, ಓಮೈ ಕಡವಲೆ, ಬ್ಯಾಚುಲರ್ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.

ಅವರ ಅಗಲಿಕೆ ತಮಿಳು ಚಿತ್ರರಂಗಕ್ಕೆ ಶಾಕ್ ತಂದಿದೆ. ತಮಿಳು ಫಿಲ್ಮ್​ ಇಂಡಸ್ಟ್ರಿಯ ಅನೇಕರು ದಿಲ್ಲಿ ಬಾಬು ಸಾವಿಗೆ ಸಂತಾಪ ಸೂಚಿಸಿದ್ದಾರೆ.

ದಿಲ್ಲಿಬಾಬು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವು ಕೊನೆಯುಸಿರೆಳೆದಿದ್ದಾರೆ.

ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ದಿಲ್ಲಿ ಬಾಬು ಅವರು Axess Film Factory ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪವಿತ್ರಾ ಗೌಡ ಜೊತೆ 10 ವರ್ಷದಿಂದ ಸಂಬಂಧ: ಚಾರ್ಜ್ ಶೀಟ್ ನಲ್ಲಿ ದರ್ಶನ್ ತಪ್ಪೊಪ್ಪಿಗೆಯಲ್ಲಿ ಏನಿದೆ