Shobhitha Shivanna: ನಟಿ ಶೋಭಿತಾ ಶಿವಣ್ಣ ಸಾವಿಗೆ ಮುನ್ನ ಬರೆದ ಪತ್ರ ಪತ್ತೆ: ಇದರಲ್ಲಿದೆ ರಹಸ್ಯ

Krishnaveni K
ಸೋಮವಾರ, 2 ಡಿಸೆಂಬರ್ 2024 (14:27 IST)
Photo Credit: X
ಹೈದರಾಬಾದ್: ಕನ್ನಡ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಮುನ್ನ ಬರೆದಿದ್ದ ಪತ್ರವೊಂದು ಪೊಲೀಸರಿಗೆ ಸಿಕ್ಕಿದ್ದು, ಇದರಲ್ಲಿ ಸೀಕ್ರೆಟ್ ಸಾಲುಗಳನ್ನು ಬರೆಯಲಾಗಿದೆ ಎಂದು ತಿಳಿದುಬಂದಿದೆ.

ಬ್ರಹ್ಮಗಂಟು ಧಾರವಾಹಿ ಖ್ಯಾತಿಯ ಶೋಭಿತಾ ಶಿವಣ್ಣ ಮೊನ್ನೆ ತಡರಾತ್ರಿ ಹೈದರಾಬಾದ್ ನ ತಮ್ಮ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದರು. ಅವರ ಸಾವಿಗೆ ನಿಖರ ಕಾರಣವೇನೆಂದು ಇದುವರೆಗೆ ತಿಳಿದುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದ್ದು, ಬಳಿಕ ಬೆಂಗಳೂರಿಗೆ ಕರೆ ತರುವ ನಿರೀಕ್ಷೆಯಿದೆ.

ಈ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಪೊಲೀಸರಿಗೆ ಶೋಭಿತಾ ಮನೆಯಲ್ಲಿ ಡೆತ್ ನೋಟ್ ಸಿಕ್ಕಿದೆ. ಈ ಡೆತ್ ನೋಟ್ ನಲ್ಲಿ ಎರಡೇ ಎರಡು ಸಾಲು ಬರೆಯಲಾಗಿದ್ದು, ಆ ಸಾಲಿನ ಅರ್ಥವೇನೆಂದು ಈಗ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.

‘ನೀನು ಸಾಯಬಹುದು ಅಂದ್ರೆ ಸಾಯಬಹುದು’ ಎಂದು ಒಂದು ಲೈನ್ ಬರೆಯಲಾಗಿದ್ದು ಇನ್ನೊಂದು ಲೈನ್ ನಲ್ಲಿ ‘ಜೀವನದಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿದೆ’ ಎಂದು ಬರೆಯಲಾಗಿದೆ. ಈ ಸಾಲಿನ ಅರ್ಥವೇನು, ಅವರು ಖಿನ್ನತೆಯಿಂದ ಬಳಲುತ್ತಿದ್ದರೇ, ದಂಪತಿ ನಡುವೆ ಭಿನ್ನಾಭಿಪ್ರಾಯಗಳಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಮ್ಮ ಸಹೋದರಿಗೆ ಎರಡು ದಿನಗಳ ಹಿಂದಷ್ಟೇ ಕರೆ ಮಾಡಿದ್ದ ಶೋಭಿತಾ ಸಂತೋಷದಿಂದಿರುವುದಾಗಿ ಹೇಳಿದ್ದಲ್ಲದೇ, ಸದ್ಯದಲ್ಲೇ ಊರಿಗೆ ಬರುವುದಾಗಿ ಹೇಳಿದ್ದರಂತೆ. ಶೋಭಿತಾ ಆತ್ಮಹತ್ಯೆಗೆ ಶರಣಾಗುವ ಸಂದರ್ಭದಲ್ಲಿ ಪತಿ ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಮುಂದಿನ ಸುದ್ದಿ
Show comments