Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್ ’ಲೀಡರ್’ ಪಾತ್ರ ಬಹಿರಂಗ

ಶಿವರಾಜ್ ಕುಮಾರ್ ’ಲೀಡರ್’ ಪಾತ್ರ ಬಹಿರಂಗ
Bangalore , ಗುರುವಾರ, 9 ಫೆಬ್ರವರಿ 2017 (11:21 IST)
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ’ಲೀಡರ್’ ಚಿತ್ರದಲ್ಲಿನ ಪಾತ್ರ ಕಡೆಗೂ ಬಹಿರಂಗವಾಗಿದೆ. ಈ ಚಿತ್ರದಲ್ಲಿ ಶಿವಣ್ಣ ಯಾವ ರೀತಿ ಕಾಣಿಸಲಿದ್ದಾರೆ, ಅವರ ಪಾತ್ರ ಏನು, ಎತ್ತ ಎಂಬ ಕುತೂಹಲ ಅಭಿಮಾನಿಗಳಿಗಿತ್ತು. ಈ ಬಗ್ಗೆ ಚಿತ್ರತಂಡ ಸಹ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ.
 
ಒಮ್ಮೆ ಲೀಡರ್ ಚಿತ್ರದ ಬಗ್ಗೆ ಮಾತನಾಡುತ್ತಾ, ಸ್ವತಃ ಶಿವಣ್ಣನೇ ಹೀಗೆಂದಿದ್ದರು..."ಹಿಂದೆ ಜನನ ಇಟ್ಟುಕೊಂಡು ತಿರುಗೋನು ಲೀಡರ್ ಅಲ್ಲ...ನಾಯಕರನ್ನು ಹುಟ್ಟುಹಾಕುವವನೇ ನಿಜವಾದ ಲೀಡರ್" ಎಂದಿದ್ದರು. ಚಿತ್ರದಲ್ಲಿ ಶಿವಣ್ಣ ಬಹುಶಃ ಡಾನ್ ಆಗಿ ಕಾಣಿಸಲಿದ್ದಾರಾ ಎಂಬ ಕುತೂಹಲ ಮೂಡಿತ್ತು. 
 
ಆದರೆ ಶಿವಣ್ಣ ಚಿತ್ರದಲ್ಲಿ ಆರ್ಮಿ ಆಫೀಸರ್ ಆಗಿ ಕಾಣಿಸಲಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ. ಸದ್ಯಕ್ಕೆ ಈ ಚಿತ್ರದ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿದ್ದು, ಶಿವಣ್ಣ ಆರ್ಮಿ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ರಿಲೀಸ್ ಆಗಿವೆ. ಕಾಶ್ಮೀರ, ಆರ್ಮಿ ಡ್ರೆಸ್ ಅಂದ್ರೆ ಇದೊಂದು ಯುದ್ಧ ಹಿನ್ನೆಲೆಯಲ್ಲಿ ಸಾಗುವ ಚಿತ್ರ ಎಂಬ ಸುಳಿವು ಸಿಕ್ಕಿದೆ. 
 
ಶಿವಣ್ಣನ ಜತೆ ವಿಜಯ್ ರಾಘವೇಂದ್ರ ಹಾಗು ಗುರುರಾಜ್ ಜಗ್ಗೇಶ್ ಸಹ ಅಭಿನಯಿಸಿದ್ದು ಅವರು ಆರ್ಮಿ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರದ ನಾಯಕಿ ಪ್ರಣೀತಾ. ಜತೆಗೆ ಶರ್ಮಿಳಾ ಮಾಂಡ್ರೆ ಮತ್ತು ಆಶಿಕಾ ಚಿತ್ರದ ಇನ್ನಿಬ್ಬರು ನಾಯಕಿಯರು. ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಚಿತ್ರದ ನಿರ್ಮಾಪಕರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಯ್ ಫ್ರೆಂಡ್ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ ಸನ್ನಿ ಲಿಯೋನ್