Select Your Language

Notifications

webdunia
webdunia
webdunia
webdunia

ಕಾಶ್ಮೀರದಿಂದ ವಾಪಸ್ ಆದ ಹ್ಯಾಟ್ರಿಕ್ ಹೀರೋ ಶಿವಣ್ಣ

ಕಾಶ್ಮೀರದಿಂದ ವಾಪಸ್ ಆದ ಹ್ಯಾಟ್ರಿಕ್ ಹೀರೋ ಶಿವಣ್ಣ
Bangalore , ಶುಕ್ರವಾರ, 24 ಫೆಬ್ರವರಿ 2017 (17:59 IST)
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಈಗಾಗಲೆ ಹದಿನಾರು ದಿನಗಳ ಕಾಲ ಕಾಶ್ಮೀರದ ರಮಣೀಯ ತಾಣಗಳಲ್ಲಿ ಚಿತ್ರೀಕರಿಸಿಕೊಳ್ಳಲಾಗಿದ್ದು, ಸಾಹಸ ಸನ್ನಿವೇಶ ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದೆ ಚಿತ್ರತಂಡ.
 
ಈ ಮೂಲಕ ಲೀಡರ್ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದೆ. ಕೆಲವು ದೃಶ್ಯಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಿಕೊಳ್ಳಬೇಕಾಗಿತ್ತು. ಮೂವತ್ತು ಮಂದಿ ಫೈಟರ್‌ಗಳು ಸೇರಿದಂತೆ ನೂರಿಪ್ಪತ್ತು ಮಂದಿ ತಂಡ ಕಾಶ್ಮೀರ ಚಿತ್ರೀಕರಣದಲ್ಲಿ ಭಾಗಿಯಾಗಿತ್ತು. ಇದೀಗ ಅದನ್ನು ಯಶಸ್ವಿಯಾಗಿ ಮುಗಿಸಿಕೊಂಡು ಹಿಂತಿರುಗಿರುವುದಾಗ್ ಲೀಡರ್ ಚಿತ್ರತಂಡ ತಿಳಿಸಿದೆ.  
 
ವಿಜಯ್ ಮಾಸ್ಟರ್ ಸಾಹಸ ಸಂಯೋಜನೆಯ ಫೈಟ್‌ಗಳನ್ನು ಶಿವಣ್ಣ ಅಭಿನಯದಲ್ಲಿ ಸೆರೆಹಿಡಿಯಲಾಗಿದೆ. ಇನ್ನು ಎರಡು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಪಾತ್ರವರ್ಗದಲ್ಲಿ ಶಿವರಾಜ್ ಕುಮಾರ್ ಜತೆಗೆ ಬೇಬಿ ಪರಿಣೀತಾ, ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಪ್ರಣೀತಾ, ಆಶಿಕಾ ವಂಶಿಕೃಷ್ಣ, ಲಹರಿ ವೇಲು ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ನಿರ್ಮಾಣದ ಚಿತ್ರಕ್ಕೆ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ರುಚಿ ನೀಡುವ ಒಂದೇ ಒಂದು ತುತ್ತು ಸಾಕಲ್ಲವೇ? ಪಾತ್ರಗಳೂ ಅಷ್ಟ’