Select Your Language

Notifications

webdunia
webdunia
webdunia
webdunia

’ರುಚಿ ನೀಡುವ ಒಂದೇ ಒಂದು ತುತ್ತು ಸಾಕಲ್ಲವೇ? ಪಾತ್ರಗಳೂ ಅಷ್ಟ’

’ರುಚಿ ನೀಡುವ ಒಂದೇ ಒಂದು ತುತ್ತು ಸಾಕಲ್ಲವೇ? ಪಾತ್ರಗಳೂ ಅಷ್ಟ’
New Delhi , ಶುಕ್ರವಾರ, 24 ಫೆಬ್ರವರಿ 2017 (12:46 IST)
’ಸಿಂಗಂ 3’ ಚಿತ್ರದಲ್ಲಿ ಪತ್ರಕರ್ತೆಯಾಗಿ ಸದ್ದು ಮಾಡಿದ ನಟಿ ಶ್ರುತಿ ಹಾಸನ್ ಎಲ್ಲರ ಗಮನಸೆಳೆದಿದ್ದಾರೆ. ಚಿತ್ರದಲ್ಲಿ ಶ್ರುತಿ ಪಾತ್ರ ತುಂಬಾ ಚಿಕ್ಕದಾಯಿತೆಂದು, ಪ್ರಾಮುಖ್ಯತೆಯೇ ಇಲ್ಲ ಎಂದು ಅಭಿಮಾನಿಗಳು, ಸ್ನೇಹಿತರು ಕೇಳುತ್ತಿದ್ದಾರಂತೆ. ಈ ವಿಷಯದ ಬಗ್ಗೆ ಶ್ರುತಿ ಹಾಸನ್ ಪ್ರತಿಕ್ರಿಯಿಸಿದ್ದಾರೆ.
 
ಇದಕ್ಕೂ ಮೊದಲು ಡಿ ಡೇ ಚಿತ್ರದಲ್ಲಿ ನಾನು ಕಾಣಿಸಿಕೊಂಡಿದ್ದು ಕೇವಲ 11 ನಿಮಿಷ. ಆದರೂ ಆ ಪಾತ್ರ ಮತ್ತು ಸಿನಿಮಾವನ್ನು ಜೀವನಪರ್ಯಂತ ಜ್ಞಾಪಕದಲ್ಲಿಟ್ಟುಕೊಳ್ಳುತ್ತೇನೆ. ಒಮ್ಮೊಮ್ಮೆ ಒಂದು ಫ್ರೇಮ್‌ನಲ್ಲಿ ಕಾಣಿಸಿಕೊಂಡರೂ ಸಾಕು ಎಂದಿದ್ದಾರೆ.
 
ಅರೆ ಸೂಪರ್ ಆಗಿ ಅಭಿನಯಿಸಿದ್ದಾರೆ ಎಂದು ಅನ್ನಿಸಿಕೊಳ್ಳಲು ಒಂದು ಸನ್ನಿವೇಶ ಸಾಕು. ಸಿನಿಮಾದಲ್ಲಿ 60 ಸೀನ್‍ಗಳಿದ್ದರೆ, ಎಲ್ಲಾ ಸೀನ್‌ಗಳಲ್ಲಿ ಕಾಣಿಸಿಕೊಂಡರೂ ಪ್ರಯೋಜನ ಇರಲ್ಲ. ಬಾಯಿಗೆ ರುಚಿ ನೀಡುವ ಒಂದೇ ಒಂದು ತುತ್ತು ತಿಂದರೂ ಹೊಟ್ಟೆ ತುಂಬುತ್ತದೆ. ಪಾತ್ರಗಳು ಅಷ್ಟೇ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ನಟಿ ಶಿಲ್ಪಾಶೆಟ್ಟಿ