Select Your Language

Notifications

webdunia
webdunia
webdunia
webdunia

ಶಿವಣ್ಣ ಲೀಡರ್ ಸಿನಿಮಾ ಕಾಶ್ಮೀರದಲ್ಲಿ ಶೂಟಿಂಗ್

ಶಿವಣ್ಣ ಲೀಡರ್ ಸಿನಿಮಾ ಕಾಶ್ಮೀರದಲ್ಲಿ ಶೂಟಿಂಗ್
Bangalore , ಮಂಗಳವಾರ, 17 ಜನವರಿ 2017 (12:03 IST)
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಲೀಡರ್ ಚಿತ್ರತಂಡ ಶೀಘ್ರದಲ್ಲೇ ಕಾಶ್ಮೀರ ಕಣಿವೆಗೆ ಹೊರಡಲಿದೆ. ತಮ್ಮ ಮುಂದಿನ  ಲೀಡರ್ ಚಿತ್ರದ ಶೂಟಿಂಗ್ ಅಲ್ಲಿ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.
 
ಕೆಲವೊಂದು ಪ್ರಮುಖ ಭಾಗಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಿಕೊಳ್ಳಲಿದ್ದು, ಅದಾದ ಬಳಿಕ ಚಿತ್ರ ಕತಾರ್‌ಗೆ ಪಯಣ ಬೆಳಸಲಿದೆ. ಅಲ್ಲಿ ಹಾಡೊಂದನ್ನುಚಿತ್ರೀಕರಿಸಿಕೊಳ್ಳಲಿದ್ದಾರೆ. ಫೆಬ್ರವರಿ ಕೊನೆಗೆ ಚಿತ್ರೀಕರಣ ಮುಗಿಸಿಕೊಂಡು ಏಪ್ರಿಲ್ ವೇಳೆಗೆ ಚಿತ್ರಮಂದಿರಗಳಲ್ಲಿ ’ಲೀಡರ್’ ಆಟ ಶುರುವಾಗಲಿದೆ.
 
ಬಹುತಾರಾಗಣದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ಯೋಗಿ, ವಿಜಯ್ ರಾಘವೇಂದ್ರ, ಪ್ರಣೀತಾ, ಗುರು ಜಗ್ಗೇಶ್, ಪರಿಣಿತಾ ಕಿಟ್ಟಿ, ಆಶಿಕಾ, ಶರ್ಮಿಳಾ ಮಾಂಡ್ರೆ ತಾರಾಗಣದಲ್ಲಿದ್ದಾರೆ. ತರುಣ್ ಶಿವಪ್ಪ ನಿರ್ಮಿಸುತ್ತಿರುವ ಚಿತ್ರ. ವೀರ್ ಸಮರ್ಥ್ ಸಂಗೀತ, ಗುರುಪ್ರಶಾಂತ್ ರೈ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೃತವರ್ಷಿಣಿ ಮತ್ತು ಅವನು ಮತ್ತೆ ಶ್ರಾವಣಿ “ಮಹಾ ಸಂಚಿಕೆ”