Select Your Language

Notifications

webdunia
webdunia
webdunia
webdunia

ಈ ವರ್ಷದ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಶಿವರಾಜ್ ಕುಮಾರ್ ಚಿತ್ರಗಳು
Bangalore , ಬುಧವಾರ, 28 ಡಿಸೆಂಬರ್ 2016 (10:45 IST)
ಸ್ಯಾಂಡಲ್‌ವುಡ್ ಯುವರಾಜ, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ವರ್ಷದ ನಟ ಅಂತ ಹೇಳಬಹುದು. ಯಾಕೆಂದರೆ ಅವರ ಚಿತ್ರಗಳು ಬಾಕ್ಸಾಫೀಸಲ್ಲಿ ಭರ್ಜರಿ ಸೌಂಡ್ ಮಾಡಿವೆ. 2016ರ ಹೊಸ ವರ್ಷದಲ್ಲಿ ಶಿವಣ್ಣ ಖಾತೆ ಓಪನ್ ಮಾಡಿದ್ದೇ ಕಿಲ್ಲಿಂಗ್ ವೀರಪ್ಪನ್ ಚಿತ್ರದ ಮೂಲಕ.
 
ಹಲವಾರು ವಿಶೇಷಗಳ ಆ ಚಿತ್ರ ತೆಲುಗು, ಹಿಂದಿ ಭಾಷೆಗಳಿಗೂ ಡಬ್ ಆಯಿತು. ಚಂದನವನದಲ್ಲಿ ಶಿವಣ್ಣ ಇನ್ನೂ ಬೇಡಿಕೆಯ ನಟ ಎಂಬುದು ಮತ್ತೊಮ್ಮೆ ಸಾಬೀತುಪಡಿಸಿದ ಸಿನಿಮಾ. ಈ ವರ್ಷ ಒಟ್ಟಾರೆ ಶಿವಣ್ಣ ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡರು. 
 
ಎಲ್ಲವೂ ಒಂದಕ್ಕಿಂತ ಒಂದು ಭಿನ್ನ. ಕಿಲ್ಲಿಂಗ್ ವೀರಪ್ಪನ್, ಶಿವಲಿಂಗ ಮತ್ತು ಸಂತೆಯಲ್ಲಿ ನಿಂತ ಕಬೀರ. ಎರಡು ಚಿತ್ರಗಳು ಬಾಕ್ಸಾಫೀಸಲ್ಲಿ ಗೆಲುವು ಕಂಡಿವೆ. ಕಬೀರ ಮಾತ್ರ ಉತ್ತಮ ಪ್ರಶಂಸೆಗೆ ಪಾತ್ರವಾಯಿತು. ಅವರ ಹಲವಾರು ಚಿತ್ರಗಳು ನಿರ್ಮಾಣ ಹಂತದಲ್ಲಿವೆ. 
 
ವಿಶೇಷ ಎಂದರೆ 2017ರ ಮೊದಲ ವಾರದಲ್ಲೇ ಶಿವಣ್ಣ ಖಾತೆ ತೆರೆಯುತ್ತಿರುವುದು. ಅವರ ಶ್ರೀಕಂಠ ಚಿತ್ರ 2017ರ ಜನವರಿ ಮೊದಲ ವಾರದಲ್ಲಿ ತೆರೆಕಾಣುತ್ತಿದೆ. ಮಂಜು ಸ್ವರಾಜ್ ನಿರ್ದೆಶನದ ಈ ಚಿತ್ರಕ್ಕೆ ಮನು ಗೌಡ ನಿರ್ಮಾಪಕರು. ಚಾಂದಿನಿ ಶ್ರೀಧರನ್ ನಾಯಕಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವರ್ಷದ ಕೊನೆ ಚಿತ್ರ ’ಹ್ಯಾಪಿ ಮ್ಯಾರೀಡ್ ಲೈಫ್’