ವಿದ್ಯೆ ಮತ್ತು ಸಮಯಕ್ಕೆ ಬೆಲೆ ನೀಡದ ಓರ್ವ ವ್ಯಕ್ತಿಯ ಜೀವನದಲ್ಲಿ ಏನೇನೆಲ್ಲ ನಡೆಯುತ್ತದೆ ಎಂಬುದರ ಸುತ್ತ ಹೆಣೆದಿರುವ ಕಥೆಯನ್ನು ಹೊಂದಿದೆ. ಹುಟ್ಟಾ ಸೋಮಾರಿಯಾದ ಮಗನನ್ನು ಕೆಲಸಕ್ಕೆ ಹಚ್ಚಿ ಸರಿದಾರಿಗೆ ತರಲು ಯತ್ನಿಸಿ ಸೋತ ಹೆತ್ತವರು ಅವನಿಗೊಂದು ಮದುವೆ ಮಾಡುತ್ತಾರೆ.
ಆ ನಂತರದಲ್ಲಿ ಏನೇನೆಲ್ಲ ಘಟನಾವಳಿಗಳು ನಡೆಯುತ್ತವೆಂಬುದನ್ನು ಕುತೂಹಲಕಾರಿಯಾಗಿ ಕಟ್ಟಿ ಕೊಟ್ಟಿದ್ದಾರಂತೆ ನಿರ್ದೇಶಕರು. ಆರ್.ಕೆ ಸಿನೆ ಕಂಬೈನ್ಸ್ ಲಾಂಛನದಲ್ಲಿ ತಯಾರಾಗಿರುವ, ಆನಂದ್ ವಠಾರ್ ನಿರ್ದೇಶನದ ’ಹ್ಯಾಪಿ ಮ್ಯಾರೀಡ್ ಲೈಫ್’ ಚಿತ್ರ ಇದೇ ಶುಕ್ರವಾರದಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಆರ್.ಕೆ ಸಿನೆ ಕಂಬೈನ್ಸ್ ಲಾಂಛನದಲ್ಲಿ ತಯಾರಾಗಿರುವ, ಆನಂದ್ ವಠಾರ್ ನಿರ್ದೇಶನದ ಅವರದ್ದೇ ಛಾಯಾಗ್ರಹಣ, ಅನೀಲ್ ಸಿ ಜೆ ಸಂಗೀತ, ಅಲೇಕ್ಸ್ ಸಂಕಲನ ಇರುವ ಚಿತ್ರ ಈ ವಾರ ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.