Publish Date: Fri, 04 Dec 2020 (11:07 IST)
Updated Date: Fri, 04 Dec 2020 (11:09 IST)
ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ ಶಿವಪ್ಪ ಚಿತ್ರತಂಡ ಖೈದಿಗಳೊಂದಿಗೆ ಪಕ್ಕಾ ಖೈದಿಗಳಾಗಿ ಗುದ್ದಲಿ, ಹಾರೆ ತೆಗೆದುಕೊಂಡು ಶ್ರಮದ ಕೆಲಸ ಮಾಡಿದೆ!
ಆದರೆ ಹೀಗೆ ಮಾಡಿರುವುದು ಚಿತ್ರದ ಶೂಟಿಂಗ್ ಗಾಗಿ. ಅಲ್ಲಿದ್ದವರೂ ನಿಜವಾದ ಖೈದಿಗಳಲ್ಲ. ಶಿವರಾಜ್ ಕುಮಾರ್ ನಾಯಕರಾಗಿರುವ ಪೃಥ್ವಿ ಅಂಬರ್, ಧನಂಜಯ ಅಭಿನಯಿಸುತ್ತಿರುವ ಶಿವಪ್ಪ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನಡೆದಿತ್ತು. ಇದೀಗ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ತಿಯಾಗಿದೆ ಎಂದು ನಿರ್ದೇಶಕ ವಿಜಯ್ ಮಿಲ್ಟನ್ ಮಾಹಿತಿ ನೀಡಿದ್ದಾರೆ. ಮೊದಲ ಹಂತದಲ್ಲಿ ಎಂಟು ದಿನಗಳ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಇನ್ನುಳಿದ ಭಾಗದ ಚಿತ್ರೀಕರಣ ನಡೆಯಲಿದೆ.