ಸ್ಯಾಂಡಲ್‌ವುಡ್‌ನ ಯುವರಾಜ ಶಿವರಾಜ್ ಕುಮಾರ್ ಭಿನ್ನ ಗೆಟಪ್‌ನಲ್ಲಿ ಬರುತ್ತಿರುವ ಚಿತ್ರ ’ಟಗರು’. ಈ ಚಿತ್ರಕ್ಕೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿದ್ದು ಶಿವಣ್ಣ ಭಿನ್ನ ಹೇರ್ ಸ್ಟೈಲಲ್ಲಿ ಕಾಣಿಸಲಿದ್ದಾರೆ.
ಸಾಮಾನ್ಯವಾಗಿ ಶಿವಣ್ಣ ಅಂದ್ರೆ ಅವರ ಫಿಟ್‌ನೆಸ್ ಪ್ರಮುಖ ಆಕರ್ಷಣೆ. ವಯಸ್ಸು 50 ಆಗಿದ್ದರೂ ಇನ್ನೂ ಚಿರಯುವಕನಂತೆ ಕಾಣಿಸುತ್ತಾರೆ. ಅವರ ವಯಸ್ಸಿನ ಅದೆಷ್ಟೋ ಕಲಾವಿದರಿಗೆ ಕೂದಲೇ ಇಲ್ಲ.
ಕೆಲವರಂತೂ ವಿಗ್ ಬಳಸುತ್ತಿದ್ದಾರೆ. ಇನ್ನೂ ಕೆಲವರು ಪೋಷಕಪಾತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಶಿವಣ್ಣ ಮಾತ್ರ ಇನ್ನೂ ಎಂಗ್ ಅಂಡ್ ಎನರ್ಜಿಟಿಕ್. ಇದೀಗ ಈ ಸಿನಿಮಾಗಾಗಿ ವಿಭಿನ್ನ ಸ್ಟೈಲ್ ಮಾಡಿಸಿಕೊಂಡಿದ್ದಾರಂತೆ ಶಿವಣ್ಣ.
ಅದು ಏನು ಎತ್ತ ಅಂತ ಗೊತ್ತಾಗಬೇಕಾದರೆ ಸ್ವಲ್ಪ ದಿನವಂತೂ ಕಾಯಲೇಬೇಕು. ಈಗಾಗಲೆ ಟಗರಿನ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು ಎರಡನೇ ಹಂತ ಡಿಸೆಂಬರ್ 12ರಿಂದ ಆರಂಭವಾಗಲಿದೆಯಂತೆ. ಧನಂಜಯ್ ಕೂಡ ತಾರಾಬಳಗದಲ್ಲಿದ್ದು ವಿಲನ್ ಆಗಿ ಕಾಣಿಸುತ್ತಿದ್ದಾರೆ. ಕೆಂಡಸಂಪಿಗೆ ಖ್ಯಾತಿಯ ಮಾನ್ವಿತಾ ಹರೀಶ್ ಇದೇ ಮೊದಲ ಬಾರಿಗೆ ಶಿವಣ್ಣನಿಗೆ ಜೋಡಿಯಾಗುತ್ತಿವ ಚಿತ್ರ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.