ಮುಂಬೈ: ಬಾಲಿವುಡ್ ಬಿಗ್ ಬಹು ಐಶ್ವರ್ಯಾ ರೈ ಕಣ್ಣೀರು ಹಾಕಿದ್ದಾರೆ. ಇತ್ತೀಚೆಗೆ ಆನ್ ಲೈನ್ ಗಳಲ್ಲಿ ಅವರು ಆತ್ಮಹತ್ಯೆ ಮಾಡಿದ್ದಾರೆಂಬ ಸುಳ್ಳು ಸುದ್ದಿ ಹರಡಿತ್ತು. ಅದರ ಬೆನ್ನಲ್ಲೇ ಐಶ್ ಕಣ್ಣೀರು ಹಾಕಿದ್ದು ಸುದ್ದಿಯಾಗಿದೆ. ಹಾಗಾದರೆ ಅವರ ಜೀವನದಲ್ಲಿ ನಿಜವಾಗಿಯೂ ಸಮಸ್ಯೆ ಇದೆಯಾ?
ಅಷ್ಟೆಲ್ಲಾ ಗಾಬರಿಯಾಗೋದು ಬೇಡ. ಹಾಗೆ ಎಂತದ್ದೂ ಆಗಿಲ್ಲ. ಅವರು ಕಣ್ಣೀರು ಹಾಕಿದ್ದು ಅವರ ನೃತ್ಯ ಗುರುವಿನ ಡ್ಯಾನ್ಸ್ ನೋಡಿ. ಮೊದಲ ವಲ್ಡ್ ಕಾಂಗ್ರೆಸ್ ಡ್ಯಾನ್ಸ್ ಕಾರ್ಯಕ್ರಮ ಉದ್ಘಾಟಿಸಿ ಐಶ್ ಬೇಬಿಗೆ ಅವರ ಬಾಲ್ಯದ ನೃತ್ಯ ಗುರು ಲತಾ ಸುರೇಂದ್ರ ಡ್ಯಾನ್ಸ್ ಮಾಡಿ ಅದನ್ನು ತನ್ನ ಶಿಷ್ಯೆಗೆ ಡೆಡಿಕೇಟ್ ಮಾಡಿದರಂತೆ.
ಇದನ್ನು ನೋಡಿ ಐಶ್ ಗೆ ಕಣ್ಣಲ್ಲಿ ನೀರೇ ಹರಿಯಿತಂತೆ. ಆಕೆಯೊಂದಿಗೆ ನಾನು ಎರಡನೇ ಕ್ಲಾಸ್ ನಿಂದ ಏಳನೇ ಕ್ಲಾಸ್ ನವರೆಗೂ ನೃತ್ಯ ಮಾಡಿದ್ದೆ. ಆಕೆಯೇ ನನಗೆ ನೃತ್ಯ ಕಲಿಸಿದ್ದು. ಆಕೆಯಿಂದಲೇ ನಾನು ಇಷ್ಟರಮಟ್ಟಿಗೆ ನೃತ್ಯ ಮಾಡಲು ಕಲಿತಿದ್ದು ಎಂದು ಐಶ್ ಕಣ್ಣಲ್ಲಿ ನೀರು ಹರಿಸಿದರಂತೆ ಪಾಪ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ