Webdunia - Bharat's app for daily news and videos

Install App

ಶಿವರಾಜ್ ಕುಮಾರ್ ಗೆ ಕಾಡುತ್ತಿದೆ ಅನಾರೋಗ್ಯ, ಮುಚ್ಚಿಡೋದರಲ್ಲಿ ಅರ್ಥವಿಲ್ಲ ಎಂದ ಶಿವಣ್ಣ

Krishnaveni K
ಗುರುವಾರ, 7 ನವೆಂಬರ್ 2024 (11:58 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಗೆ ಅನಾರೋಗ್ಯ ಕಾಡುತ್ತಿದೆ ಎಂದು ಕೆಲವು ದಿನಗಳಿಂದ ಗುಸು ಗುಸು ಕೇಳಿಬಂದಿತ್ತು. ಅದನ್ನೀಗ ಸ್ವತಃ ಶಿವಣ್ಣ ಖಚಿತಪಡಿಸಿದ್ದಾರೆ.

ಭೈರತಿ ರಣಗಲ್ ಸಿನಿಮಾ ಬಿಡುಗಡೆಗೆ ಮುನ್ನ ಯೂ ಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಿವಣ್ಣ ತಮ್ಮ ಅನಾರೋಗ್ಯದ ವಿಚಾರವನ್ನು ದೃಢಪಡಿಸಿದ್ದಾರೆ.  ಅದರಲ್ಲಿ ಏನಿದೆ? ಮುಚ್ಚಿಡೋದ್ರಲ್ಲಿ ಅರ್ಥವೇ ಇಲ್ಲ.ನನಗೆ ಪ್ರಾಬ್ಲಂ ಇರುವುದು ನಿಜ ಎಂದಿದ್ದಾರೆ.

ನನಗೆ ಹೆಲ್ತ್ ಪ್ರಾಬ್ಲಂ ಇದೆ. ಅದಕ್ಕೆ ಟ್ರೀಟ್ ಮೆಂಟ್ ಕೂಡಾ ಶುರುವಾಗಿದೆ. ಈಗಾಗಲೇ ಇದರ ನಡುವೆಯೇ 45 ಶೂಟಿಂಗ್ ಮುಗಿಸಿದ್ದೇನೆ. ಹಾಗಂತ ಇದನ್ನು ಮುಚ್ಚಿಡೋದರಲ್ಲಿ ಏನ್ ಅರ್ಥ ಇದೆ ಹೇಳಿ? ಯಾಕೆ ಮುಚ್ಚಿಡಬೇಕು ಎಂದು ಶಿವಣ್ಣ ಪ್ರಶ್ನೆ ಮಾಡಿದ್ದಾರೆ.

ಪ್ರಾಬ್ಲಂ ಇದೆ, ಟ್ರೀಟ್ ಮೆಂಟ್ ನಡೆಯುತ್ತಿದೆ. ಹಾಗಂತ ಕೆಲಸಕ್ಕೆ ಏನೂ ತೊಂದರೆಯಾಗಿಲ್ಲ. ಸದ್ಯದಲ್ಲೇ ಒಂದು ಆಪರೇಷನ್ ಮಾಡಿಸಬೇಕಿದೆ. ಅದನ್ನು ಬೆಂಗಳೂರಿನಲ್ಲೇ ಮಾಡುವುದಾ ಅಮೆರಿಕಾದಲ್ಲಿ ಮಾಡುವುದಾ ಎಂದು ತೀರ್ಮಾನವಾಗಿಲ್ಲ. ಆ ಒಂದು ಆಪರೇಷನ್ ಆದ್ರೆ ನಾರ್ಮಲ್ ಆಗ್ತೀನಿ. ಏನೂ ತೊಂದರೆಯಿಲ್ಲ. ನಿಮ್ಮ ಶಿವಣ್ಣ ಆಕ್ಟೀವ್ ಆಗಿಯೇ ಇರ್ತಾರೆ. ಭೈರತಿ ರಣಗಲ್ ರಿಲೀಸ್ ಮುಗಿಸ್ಕೊಂಡು ಸರ್ಜರಿ ಮಾಡಿಸಿಕೊಳ್ಳುತ್ತೇನೆ ಎಂದು ಶಿವಣ್ಣ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಕಿನಿ ತೊಟ್ಟು ಪಡ್ಡೆ ಹೈಕಳ ಹಾರ್ಟ್‌ ಬೀಟ್ ಹೆಚ್ಚಿಸಿದ ಸೋನು ಗೌಡ

ಮತ್ತೇ ಒಂದಾಗುವ ನಿರ್ಧಾರ ಕೈಗೊಂಡ ಬಾಲಿವುಡ್‌ನ ಸ್ಟಾರ್ ಜೋಡಿ, ವಕೀಲರು ಹೇಳಿದ್ದೇನು

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಮುಂದಿನ ಸುದ್ದಿ
Show comments