Webdunia - Bharat's app for daily news and videos

Install App

ತರುಣ್, ಸೋನಲ್ ಅರಿಶಿನ ಶಾಸ್ತ್ರದಲ್ಲಿ ಕುಣಿದು ಕುಪ್ಪಳಿಸಿದ ಶರಣ್, ಪ್ರೇಮ್, ಮೇಘಾ ಶೆಟ್ಟಿ

Sampriya
ಶನಿವಾರ, 10 ಆಗಸ್ಟ್ 2024 (20:25 IST)
Photo Courtesy X
ಬೆಂಗಳೂರು: ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಂಥೆರೋ ಅವರ ಅರಿಶಿನ ಶಾಸ್ತ್ರ ನಿನ್ನೆ ಸಂಭ್ರಮ ಸಡಗರದಿಂದ ನಡೆಯಿತು.  

ಈ ಸಮಾರಂಭದಲ್ಲಿ ಸ್ಯಾಂಡಲ್‌ವುಡ್ ಮಂದಿ ಕುಣಿದು ಕುಪ್ಪಳಿಸಿದರು. ಎಲ್ಲರೂ ಹಳದಿ ಬಣ್ಣದ ಬಟ್ಟೆ  ಧರಿಸಿ, ಒಬ್ಬರಿಗೊಬ್ಬರು ಅರಿಸಿನ ಹಚ್ಚುತ್ತಾ ಸಂಭ್ರಮಿಸಿದರು. ನಟರಾದ ಪ್ರೇಮ್, ಶರಣ್, ಅನಿರುದ್ಧ್, ನಟಿ ಮೇಘಾ ಶೆಟ್ಟಿ ಅವರು ಡ್ಯಾನ್ಸ್ ಮಾಡಿದರು.

ಅರಿಶಿಣ ಶಾಸ್ತ್ರದ ಕ್ಲಿಪ್‌ ಅನ್ನು ತರುಣ್ ಸುಧೀರ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ನಮ್ಮ ಅರಿಶಿಣ ಶಾಸ್ತ್ರ ಪ್ರೀತಿ ಮತ್ತು ಸಂಪ್ರದಾಯದ ಸಂಭ್ರಮವಾಗಿತ್ತು. ಹಳದಿಯ ಆಚರಣೆ ಹೊಳೆಯುವಂತೆ ಮಾಡಿದ ಪ್ರತಿಯೊಬ್ಬರಿಗೂ ನಮ್ಮ ಧನ್ಯವಾದಗಳು.

ರಾಬರ್ಟ್ ಸಿನಿಮಾ ವೇಳೆ ಪ್ರೀತಿಯಲ್ಲಿ ಬಿದ್ದ ಸೋನಲ್ ತರುಣ್ ತಮ್ಮ ಲವ್ ವಿಚಾರವನ್ನು ರಹಸ್ಯವಾಗಿಯೇ ಇಟ್ಟಿದ್ದರು. ಮದುವೆಗೆ ಬೇಕಿರುವ ತಯಾರಿಗಳನ್ನು ಕೂಡ ಗುಟ್ಟಾಗಿಯೇ ಮಾಡಿಕೊಳ್ಳುತ್ತಿರುವಾಗ ಇವರಿಬ್ಬರ ಪ್ರೀತಿ ವಿಚಾರ ಲೀಕ್ ಆಗಿತ್ತು. ಕೆಲ ದಿನಗಳ ಹಿಂದೆ ಸೋನಾಲ್‌ ಮಂಥೆರೋ ಜೊತೆ ಮದುವೆ ಆಗುತ್ತಿರುವ ವಿಷಯವನ್ನು ನಟ ತರುಣ್‌ ಸುಧೀರ್‌ ಅವರೇ ಅಧಿಕೃತಗೊಳಿಸಿದ್ದರು. ಇಂದು ಇವರಿಬ್ಬರ ಆರತಕ್ಷತೆ ಜರುಗಲಿದೆ. ಆಗಸ್ಟ್ 11ರಂದು ಇವರ ವಿವಾಹ ನೆರವೇರುತ್ತಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments