Publish Date: Tue, 22 Dec 2020 (09:33 IST)
Updated Date: Tue, 22 Dec 2020 (09:34 IST)
ಬೆಂಗಳೂರು: ಕಾಮಿಡಿ ಕಿಂಗ್ ಶರಣ್ ನಾಯಕರಾಗಿರುವ ನಂದಕಿಶೋರ್ ನಿರ್ಮಾಣದ ಹೊಸ ಸಿನಿಮಾಗೆ ಗುರು ಶಿಷ್ಯರು ಎಂದು ಟೈಟಲ್ ಇಡಲಾಗಿದೆ. ಇದನ್ನು ನಿನ್ನೆ ಹಿರಿಯ ನಟ ದ್ವಾರಕೀಶ್ ಲಾಂಚ್ ಮಾಡಿದ್ದಾರೆ.
rr
ಆದರೆ ಶರಣ್ ಮತ್ತು ಚಿತ್ರತಂಡ ಈ ಟೈಟಲ್ ಮತ್ತು ಮೋಷನ್ ಪೋಸ್ಟರ್ ನ್ನು ನೋಡಿದ ಪ್ರೇಕ್ಷಕರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಹಳೆಯ ಟೈಟಲ್ ನ್ನು ಬಳಸಿದ್ದಕ್ಕೆ ಕೆಲವರು ಆಕ್ಷೇಪಿಸಿದ್ದರೆ, ಮತ್ತೆ ಕೆಲವರು ಹಳೆಯ ಸಿನಿಮಾಗೆ ಅಪಚಾರವಾಗದಂತೆ ನೋಡಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ. ಆದರೆ ಇದಕ್ಕಿಂತ ಹೆಚ್ಚು ಟ್ರೋಲ್ ಆಗಿರುವುದು ಮೋಷನ್ ಪೋಸ್ಟರ್ ನಲ್ಲಿ ಬಳಸಿದ ಸಂಗೀತ. ಇದು ಬೇರೆ ಸಿನಿಮಾದ ಹಾಡನ್ನು ಹೋಲುತ್ತಿದೆ ಎಂದು ಸಂಗೀತ ನಿರ್ದೇಶಕ ಅಜನೀಶ್ ಬಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಸ್ವಂತಿಕೆ ಎನ್ನುತ್ತೀರಾ ಸಂಗೀತವನ್ನೂ ಕಾಪಿ ಮಾಡಿದ್ದೀರಲ್ಲಾ ಎಂದು ಟ್ರೋಲ್ ಮಾಡಿದ್ದಾರೆ.