Publish Date: Mon, 12 Dec 2016 (09:33 IST)
Updated Date: Mon, 12 Dec 2016 (09:37 IST)
ಮುಂಬೈ: ಬಾಲಿವುಡ್ ನ ಖಾನ್ ದಾನ್ ಗಳೆಲ್ಲಾ ಇತ್ತೀಚೆಗೆ ತಮ್ಮ ಚಿತ್ರ ಬಿಡುಗಡೆಗೆ ಮೊದಲು ಯಾರ್ಯಾರನ್ನೋ ಖುಷಿ ಪಡಿಸುವುದರಲ್ಲೇ ಇರುತ್ತಾರೆ. ಶಾರುಖ್ ಖಾನ್ ಕೂಡಾ ಅದೇ ಹಾದಿ ಹಿಡಿದಿದ್ದಾರೆ.
ಸದ್ಯದಲ್ಲೇ ಅವರ ರಾಯಿಸ್ ಚಿತ್ರ ಬಿಡುಗಡೆಯಾಗಲಿದೆ. ಅದರಲ್ಲಿ ಮಹಿರಾ ಖಾನ್ ಎಂಬ ಪಾಕಿಸ್ತಾನ್ ನಟಿ ಅಭಿನಯಿಸಿದ್ದಾರೆ. ಹೀಗಾಗಿ ಪಾಕ್ ನಟಿ ನಟಿಸಿದ್ದಕ್ಕೆ ಚಿತ್ರ ಬಿಡುಗಡೆಗೆ ಅಡ್ಡಿ ಮಾಡಬೇಡಿ ಎಂದು ರಾಜ್ ಠಾಕ್ರೆ ಬಳಿ ಮನವಿ ಮಾಡುವುದಕ್ಕೆ ಸ್ವತಃ ಶಾರುಖ್ ಎಂಎನ್ಎಸ್ ಮುಖ್ಯಸ್ಥನ ಮನೆಗೆ ಭೇಟಿ ನೀಡಿದ್ದರು.
ಹಿಂದೆ ಏ ದಿಲ್ ಹೇ ಮುಷ್ಕಿಲ್ ಚಿತ್ರ ಬಿಡುಗಡೆಗೂ ಮೊದಲು ಪಾಕ್ ನಟ ನಟಿಸಿರುವ ಕಾರಣಕ್ಕೆ ಚಿತ್ರ ಬಿಡುಗಡೆಗೆ ಅಡ್ಡಿ ಮಾಡುವುದಾಗಿ ಎಂಎನ್ಎಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೂ ಹಾಗೂ ಹೀಗೂ ಚಿತ್ರ ಬಿಡುಗಡೆಯಾಗಿತ್ತು. ಈಗಲೂ ಅಂತಹದ್ದೊಂದು ವಿವಾದವಾಗದೇ ಇರಲು ಶಾರುಖ್ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ