ಹೈದರಾಬಾದ್: ರಾಜ್ಯ ವಿಂಗಡಣೆಯಾದ ಮೇಲೆ ಆಂಧ್ರ ಪ್ರದೇಶಕ್ಕೊಂದು ರಾಜಧಾನಿ ಬೇಕಾಗಿದೆ. ಆದರೆ ರಾಜಧಾನಿ ನಿರ್ಮಾಣ ಮಾಡಬೇಕಾದರೆ ಚೆಂದದೊಂದು ವಿನ್ಯಾಸ ಬೇಕು. ಇದಕ್ಕಾಗಿ ಆಂಧ್ರ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಖುದ್ದು ಬಾಹುಬಲಿ ನಿರ್ದೇಶಕ ರಾಜಮೌಳಿಗೆ ಕರೆ ನೀಡಿದ್ದಾರೆ.
ಬಾಹುಬಲಿ ಸಿನಿಮಾದಲ್ಲಿ ಅದ್ಭುತ ಸೆಟ್ ಹಾಕಿ ಸಿನಿಮಾ ಮಾಡಿದ್ದರು ರಾಜಮೌಳಿ. ಅವರ ಕಲ್ಪನೆಗೆ ಎಲ್ಲೆಡೆಯಿಂದ ಶ್ಲಾಘನೆ ಸಿಕ್ಕಿತ್ತು. ಅದೇ ರೀತಿ ಆಂಧ್ರ ರಾಜಧಾನಿ ನಿರ್ಮಾಣಕ್ಕೂ ತಮ್ಮ ಕಲ್ಪನೆಯ ವಿನ್ಯಾಸ ನೀಡಲು ರಾಜಮೌಳಿಯನ್ನು ಕೇಳಿಕೊಂಡಿದೆಯಂತೆ ಆಂಧ್ರ ಸರ್ಕಾರ.
ಇದಕ್ಕೆ ರಾಜಮೌಳಿ ಕೂಡಾ ಗ್ರೀನ್ ಸಿಗ್ನಲ್ ನೀಡಿದೆಯಂತೆ. ಸದ್ಯಕ್ಕೆ ಬಾಹುಬಲಿ 2 ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ರಾಜಮೌಳಿ ಇದಾದ ತಕ್ಷಣ ರಾಜಧಾನಿಗೆ ಸ್ಕೆಚ್ ಹಾಕಿಕೊಡಲಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ