Select Your Language

Notifications

webdunia
webdunia
webdunia
webdunia

ಡಿಸೆಂಬರ್ ಮೇಲೆ ಗಾಂಧಿನಗರಕ್ಕಿರೋ ಅಪಾರ ನಂಬಿಕೆ

ಡಿಸೆಂಬರ್ ಮೇಲೆ ಗಾಂಧಿನಗರಕ್ಕಿರೋ ಅಪಾರ ನಂಬಿಕೆ
Bangalore , ಗುರುವಾರ, 8 ಡಿಸೆಂಬರ್ 2016 (13:02 IST)
ಡಿಸೆಂಬರ್ ಅಂದ್ರೆ ಚಳಿಗಾಲ. ಜನ ಮನೆಯಲ್ಲೇ ಕೂತು ಟಿವಿ ನೋಡೋದೆ ಹೆಚ್ಚು. ಆದರೂ ಡಿಸೆಂಬರಲ್ಲಿ ರಿಲೀಸ್ ಆದ ಅದೆಷ್ಟೋ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ವರ್ಷದಲ್ಲಿ ನಾಲ್ಕು ಐದು ಸಿನಿಮಾ ಹಿಟ್ ಆದರೆ ಅದರಲ್ಲಿ ಒಂದು ಡಿಸೆಂಬರಲ್ಲಿ ರಿಲೀಸ್ ಆಗಿರುತ್ತದೆ.
 
ಹಾಗಾಗಿ ಗಾಂಧಿನಗರಕ್ಕೆ ಡಿಸೆಂಬರ್ ಅಂದ್ರೆ ಏನೋ ಒಂಥರಾ ಅಕ್ಕರೆ. ಈ ಸಲ ಡಿಸೆಂಬರಲ್ಲಿ ಸಾಕಷ್ಟು ಸಿನಿಮಾಗಳು ತೆರೆಗೆ ಬರುತ್ತಿವೆ. ಅವುಗಳಲ್ಲಿ ದರ್ಶನ್ ಅಭಿನಯದ ಚಕ್ರವರ್ತಿ, ಮಲ್ಟಿಸ್ಟಾರರ್ ಚೌಕ, ರಕ್ಷಿತ್ ಶೆಟ್ಟಿಯ ಕಿರಿಕ್ ಪಾರ್ಟಿ, ಸುದೀಪ್ ಅವರ ಹೆಬ್ಬುಲಿ, ಗಣೇಶ್ ಅವರ ಸುಂದರಾಂಗ ಜಾಣ, ರಮೇಶ್ ಅರವಿಂದ್ ಅವರ ಪುಷ್ಪಕ ವಿಮಾನ ಕೂಡ ಒಂದು.
 
ಇದರ ಜೊತೆಗೆ ಶಿವರಾಜ್ ಕುಮಾರ್ ಅವರ ಶ್ರೀಕಂಠ ಸಹ ವರ್ಷಾಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ. ಈ ವರ್ಷ ಹೊಸಬರ ಸಿನಿಮಾಗಳು ಗೆದ್ದಿವೆ. ಈಗ ಬಿಡುಗಡೆಯಾಗಲಿರುವ ಸಿನಿಮಾಗಳಲ್ಲಿ ಪ್ರೇಕ್ಷಕ ಪ್ರಭು ಯಾರಿಗೆ ಮಣೆ ಹಾಕಲಿದ್ದಾನೆ ಎಂಬುದನ್ನು ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಫರೆಂಟ್ ಹೇರ್‌ಸ್ಟೈಲಲ್ಲಿ ಬರಲಿದ್ದಾರೆ ಶಿವಣ್ಣ