Select Your Language

Notifications

webdunia
webdunia
webdunia
webdunia

ನಟಿ ರಮ್ಯಾ ವಿರುದ್ಧದ ದೇಶದ್ರೋಹ ಕೇಸ್ ವಜಾಗೊಳಿಸಿದ ಮಡಿಕೇರಿ ಕೋರ್ಟ್

actress ramya
ಮಡಿಕೇರಿ , ಬುಧವಾರ, 19 ಏಪ್ರಿಲ್ 2017 (19:46 IST)
ನಟಿ ರಮ್ಯಾ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನ ಮಡಿಕೇರಿಯ ಜೆಎಂಎಫ್`ಸಿ ಕೋರ್ಟ್ ವಜಾ ಮಾಡಿದೆ.
 

ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ನಟಿ ರಮ್ಯಾ, ಪಾಕಿಸ್ತಾನ ನರಕವಲ್ಲ. ಪಾಕಿಸ್ತಾನದಲ್ಲೂ ಒಳ್ಳೆಯ ಜನರಿದ್ದಾರೆ ಎಂದು ಹೇಳಿದ್ದರು. ರಮ್ಯಾ ಹೇಳಿಕೆ ದೇಶಾದ್ಯಂತ ಭಾರೀ ಟೀಕೆಗೆ ಗುರಿಯಾಗಿತ್ತು. ರಮ್ಯಾ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದರು.

ಬಳಿಕ ಅಡ್ವೋಕೇಟ್ ಒಬ್ಬರು ರಮ್ಯಾ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಿದ್ದರು. ಇವತ್ತು ಜೆಎಂಎಫ್`ಸಿ ಕೋರ್ಟ್ ಕೇಸನ್ನ ವಜಾಗೊಳಿಸಿದೆ ಎಂದು ಸ್ವತಃ ನಟಿ ರಮ್ಯಾ ಟ್ವಿಟ್ಟರ್`ನಲ್ಲಿ ಹೇಳಿಕೊಂಡಿದ್ದಾರೆ. ತನಗೆ ಬೆಂಬಲ ನೀಡಿದ ಎಲ್ಲರಿಗೂ ರಮ್ಯಾ ಧನ್ಯವಾದ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಏ.28ರಂದು ಬೆಂಗಳೂರು ನಗರ ಬಂದ್‌ : ವಾಟಾಳ್