Select Your Language

Notifications

webdunia
webdunia
webdunia
webdunia

ದೇಶದ್ರೋಹ ಪ್ರಕರಣ: ನಟಿ ಮೆಹರ್ ಅಫ್ರೋಜ್ ಶಾನ್ ಬಂಧಿಸಿದ ಬಾಂಗ್ಲಾ ಪೊಲೀಸರು

Bangla actress Meher Afroz Shan

Sampriya

ಢಾಕಾ , ಶುಕ್ರವಾರ, 7 ಫೆಬ್ರವರಿ 2025 (10:34 IST)
Photo Courtesy X
ಢಾಕಾ: ಬಾಂಗ್ಲಾ ನಟಿ ಮೆಹರ್ ಅಫ್ರೋಜ್ ಶಾನ್ ಅವರನ್ನು ಢಾಕಾ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ.

ಮೆಹರ್ ಅವರು ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವನ್ನು ಟೀಕಿಸುತ್ತಿದ್ದರು. ಇವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ರಾತ್ರಿ ಧನ್ಮೊಂಡಿಯಲ್ಲಿ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಢಾಕಾದ ಹೆಚ್ಚುವರಿ ಪೊಲೀಸ್ ಆಯುಕ್ತ ರೆಜೌಲ್ ಕರೀಮ್ ಮಲ್ಲಿಕ್ ತಿಳಿಸಿದ್ದಾರೆ.

ಮೆಹರ್ ಬಂಧನಕ್ಕೂ ಮುನ್ನ ಅವರ ಕುಟುಂಬದವರು ವಾಸವಾಗಿದ್ದ ಜಮಾಲ್ಪುರದಲ್ಲಿರುವ ಮನೆಯ ಮೇಲೆಯೂ ದಾಳಿ ನಡೆದಿದೆ. ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಜಮಾಲ್ಪುರ ಸದರ್ ಉಪಜಿಲ್ಲಾದ ನೊರುಂಡಿ ರೈಲ್ವೆ ನಿಲ್ದಾಣದ ಬಳಿ ಇರುವ ಅವರ ನಿವಾಸಕ್ಕೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ. ಈ ಮನೆ ಮೆಹರ್ ಅವರ ತಂದೆ ಎಂಜಿನಿಯರ್ ಮೊಹಮ್ಮದ್ ಅಲಿ ಅವರಿಗೆ ಸೇರಿದ್ದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್‌ ನಟ ಸೋನು ಸೂದ್‌ ವಿರುದ್ಧ ಬಂಧನ ವಾರೆಂಟ್‌: ಕಾರಣ ಇಲ್ಲಿದೆ ನೋಡಿ