Select Your Language

Notifications

webdunia
webdunia
webdunia
webdunia

ಬೆಳ್ಳಂ ಬೆಳಿಗ್ಗೆ ಡಿಕೆ ಶಿವಕುಮಾರ್ ಮನೆಗೆ ಭೇಟಿ ಕೊಟ್ಟ ಕಿಚ್ಚ ಸುದೀಪ್: ಕಾರಣ ಇಲ್ಲಿದೆ

DK Shivakumar-Sudeep

Krishnaveni K

ಬೆಂಗಳೂರು , ಗುರುವಾರ, 6 ಫೆಬ್ರವರಿ 2025 (11:31 IST)
Photo Credit: X
ಬೆಂಗಳೂರು: ಇಂದು ಬೆಳ್ಳಂ ಬೆಳಿಗ್ಗೆಯೇ ನಟ ಕಿಚ್ಚ ಸುದೀಪ್ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೆ ಕಾರಣ ಏನೆಂಬ ವಿವರ ಇಲ್ಲಿದೆ ನೋಡಿ.

ಕಿಚ್ಚ ಸುದೀಪ್ ರಾಜಕೀಯದಿಂದ ಆದಷ್ಟು ದೂರವೇ ಇರುತ್ತಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾತ್ರ ತಮ್ಮ ಆಪ್ತರು ಎಂಬ ಕಾರಣಕ್ಕೆ ಬಿಜೆಪಿ ನಾಯಕ ಬಸವರಾಜ್ ಬೊಮ್ಮಾಯಿ ಪರ ಪ್ರಚಾರ ನಡೆಸಿದ್ದರು. ಅದು ಬಿಟ್ಟರೆ ಅವರು ರಾಜಕೀಯದಿಂದ ದೂರವೇ ಇದ್ದಾರೆ.

ಈ ನಡುವೆ ಇಂದು ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಬಂದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಯಿತು. ಆದರೆ ಡಿಕೆಶಿ ಭೇಟಿಯಾಗಿರುವುದಕ್ಕೂ ಕಾರಣವಿದೆ. ಅದು ಸಿಸಿಎಲ್ ಕ್ರಿಕೆಟ್ ಲೀಗ್ ಎನ್ನಲಾಗಿದೆ.

ಇನ್ನೇನು ಬಹುಭಾಷೆಗಳ ಸಿನಿಮಾ ಕಲಾವಿದರು ಭಾಗಿಯಾಗುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭವಾಗಲಿದ್ದು ಅದರ ಉದ್ಘಾಟನೆಗೆ ಡಿಕೆಶಿಗೆ ಆಹ್ವಾನ ನೀಡಲು ಬಂದಿದ್ದಾರೆ ಎನ್ನಲಾಗಿದೆ. ಈಗಾಗಲೇ ಸುದೀಪ್ ಸೇರಿದಂತೆ ಸಿಸಿಎಲ್ ನಲ್ಲಿ ಆಡಲಿರುವ ಕರ್ನಾಟಕ ತಂಡದ ಕಲಾವಿದರು ಅಭ್ಯಾಸ ಆರಂಭಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಾದ್ಯಂತ ನಾನ್ ವೆಜ್ ಬ್ಯಾನ್ ಮಾಡ್ಬೇಕು: ಶತ್ರುಘ್ನ ಸಿನ್ಹಾ ಟ್ರೋಲ್