Select Your Language

Notifications

webdunia
webdunia
webdunia
webdunia

OTT ಗೆ ಬಂತು ರಕ್ಷಿತ್ ಶೆಟ್ಟಿಯವರ ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ

Rakshith Shetty
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಬಹಳ ದಿನಗಳಿಂದ ಕಾಯುತ್ತಿದ್ದ ಸಿಹಿ ಸುದ್ದಿ ಕೊನೆಗೂ ಸಿಕ್ಕಿದೆ. ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ನಿನ್ನೆ ಮಧ‍್ಯರಾತ್ರಿಯಿಂದಲೇ ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ಅಮೆಝೋನ್ ಪ್ರೈಮ್ ನಲ್ಲಿ ಪ್ರಸಾರ ಕಾಣುತ್ತಿದೆ. ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಎರಡು ತಿಂಗಳ ಬಳಿಕ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಹಲವು ಸಮಯದಿಂದ ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ಒಟಿಟಿಯಲ್ಲಿ ಬಿಡುಗಡೆ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು. ಡಿಸೆಂಬರ್ ಕೊನೆಯಲ್ಲಿ ಬಿಡುಗಡೆಯಾಗಲಿದೆ ಎಂದು ವದಂತಿಗಳಿತ್ತು. ಆದರೆ ಅದು ಸುಳ್ಳಾಯಿತು. ಅದಾದ ಬಳಿಕ ರಕ್ಷಿತ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಎಸ್ಎಸ್ಇ ಸೈಡ್ ಬಿ ಒಟಿಟಿಯಲ್ಲಿ ಯಾವಾಗ ಬರುತ್ತದೆ ಎಂದು ಕೇಳುತ್ತಲೇ ಇದ್ದರು.

ಇದೀಗ ಕೊನೆಗೂ ಒಟಿಟಿಯಲ್ಲಿ ನೋಡಿ ಖುಷಿಪಡಬಹುದು. ರಕ್ಷಿತ್ ಶೆಟ್ಟಿ ಜೊತೆಗೆ ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್, ಚೈತ್ರಾ ಜೆ ಆಚಾರ್ ಸೇರಿದಂತೆ ಹಲವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೊಂದು ಭಾವನಾತ್ಮಕ ಕತೆಯಾಗಿದ್ದು, ಥಿಯೇಟರ್ ನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಓಟಿಟಿಗೆ ಲಗ್ಗೆಯಿಟ್ಟ “ಸಪ್ತ ಸಾಗರದಾಚೆಯೆಲ್ಲೋ