Select Your Language

Notifications

webdunia
webdunia
webdunia
webdunia

ಅವನೇ ಶ್ರೀಮನ್ನಾರಾಯಣ ಸೆಟ್ ನಲ್ಲಾದ ಅನುಭವ ಹಂಚಿಕೊಂಡ ಸಾನ್ವಿ ಶ್ರೀವಾಸ್ತವ್

webdunia
ಶುಕ್ರವಾರ, 29 ನವೆಂಬರ್ 2019 (09:26 IST)
ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾ ಸೆಟ್ ನಲ್ಲಿ ಆದ ಅನುಭವ ನನಗೆ ಬೇರೆ ಎಲ್ಲೂ ಸಿಕ್ಕಿರಲಿಲ್ಲ ಎಂದು ನಾಯಕ ನಟಿ ಸಾನ್ವಿ ಶ್ರೀವಾಸ್ತವ್ ಹೇಳಿಕೊಂಡಿದ್ದಾರೆ.


ಅವನೇ ಶ್ರೀಮನ್ನಾರಾಯಣ ಟ್ರೈಲರ್ ಲಾಂಚ್ ಸಂದರ್ಭದಲ್ಲಿ ಸಾನ್ವಿ ಈ ಪುರುಷರ ಗ್ಯಾಂಗ್ ನಲ್ಲಿ ನಟಿಸಿದ ಅನುಭವ ಹೇಳಿಕೊಂಡಿದ್ದಾರೆ. ಸಾನ್ವಿ ಬಿಟ್ಟರೆ ಈ ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೆ ಪ್ರಧಾನ್ಯತೆಯಿಲ್ಲ. ಹೀಗಾಗಿ ಈ ಅನುಭವ ಹೇಗಿತ್ತು ಎಂದಾಗ ಸಾನ್ವಿ ಹೇಳಿದ್ದು ಹೀಗೆ.

‘ನನ್ನ ಜೀವನದಲ್ಲೂ ಯಾರೂ ನನ್ನ ಇಷ್ಟು ಮುದ್ದು ಮಾಡಿರಲಿಲ್ಲ. ಅವನೇ ಶ್ರೀಮನ್ನಾರಾಯಣ ಸಿನಿಮಾ ತಂಡ ನನ್ನ ಅಷ್ಟು ಚೆನ್ನಾಗಿ ನೋಡಿಕೊಂಡಿತು. ದೇಶಾದ್ಯಂತ ಬಿಡುಗಡೆಯಾಗುತ್ತಿರುವ ನಾಲ್ಕನೇ ಸಿನಿಮಾ ಇದು. ಬೇರೆ ರಾಜ್ಯದಿಂದ ಬಂದ ನನ್ನ ಸ್ವೀಕರಿಸಿದ ಕನ್ನಡ ಪ್ರೇಕ್ಷಕರಿಗೆ, ಮಾಧ್ಯಮಗಳಿಗೆ ನನ್ನ ಧನ್ಯವಾದ’ ಎಂದು ಸಾನ್ವಿ ಹೇಳಿಕೊಂಡಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಹೊಸ ಸಿನಿಮಾದೊಂದಿಗೆ ಬಂದ ಮಾಸ್ಟರ್ ಆನಂದ್