Select Your Language

Notifications

webdunia
webdunia
webdunia
webdunia

ಸಂತು ಸ್ಟ್ರೈಟ್ ಫಾರ್ವರ್ಡ್ ಮೊದಲ ದಿನದ ಗಳಿಕೆ 3 ಕೋಟಿ?

ಸಂತು ಸ್ಟ್ರೈಟ್ ಫಾರ್ವರ್ಡ್ ಮೊದಲ ದಿನದ ಗಳಿಕೆ 3 ಕೋಟಿ?
Bangalore , ಸೋಮವಾರ, 31 ಅಕ್ಟೋಬರ್ 2016 (10:07 IST)
ಬೆಂಗಳೂರು: ಯಶ್-ರಾಧಿಕಾ ಪಂಡಿತ್ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರ ಮೊದಲ ದಿನ 3 ಕೋಟಿ ರೂ. ಗಳಿಸಿದೆಯಂತೆ.

ಈ ವಿಷಯವನ್ನು ಚಿತ್ರತಂಡವೇ ದೃಢಪಡಿಸಿದೆ. ಅದೇ ದಿನ ಮುಕುಂದ ಮುರಾರಿ ಚಿತ್ರ ಕೂಡಾ ಬಿಡುಗಡೆಯಾಗಿತ್ತು. ಹೀಗಾಗಿ ಚಿತ್ರದ ಗಳಿಕೆಯಲ್ಲಿ ಕೊಂಚ ಹಿನ್ನಡೆಯಾದರೂ ಬಂಡವಾಳಕ್ಕೆ ಮೋಸವಾಗುವ ಸಾಧ್ಯತೆಯಿಲ್ಲ ಎನ್ನುತ್ತಿದೆ ಚಿತ್ರತಂಡ.

ಸಂತು ಚಿತ್ರ ರಾಜ್ಯಾದ್ಯಂತ 240 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಸದ್ಯಕ್ಕೆ ಹಲವು ಬಿಗ್ ಸಿನಿಮಾಗಳು ರಾಜ್ಯಾದ್ಯಂತ ಪ್ರದರ್ಶನವಾಗುತ್ತಿದೆ. ಆದರೆ ಚಿತ್ರದ ಬಗ್ಗೆ ಕೆಲವು ಮಾಧ್ಯಮಗಳು ನೆಗೆಟಿವ್ ಆಗಿ ವರದಿ ಮಾಡುತ್ತಿರುವುದು ಚಿತ್ರಕ್ಕೆ ತೊಂದರೆಯಾಗುತ್ತಿದೆ ಎಂದೂ ನಿರ್ಮಾಪಕ ಮಂಜು ಬೇಸರ ವ್ಯಕ್ತಪಡಿಸಿದ್ದಾರೆ.

ಕಾವೇರಿ ವಿವಾದದ ವಿಚಾರದಲ್ಲಿ ಯಶ್ ಇತ್ತೀಚೆಗೆ ಟಿವಿ ಮಾಧ್ಯಮಗಳನ್ನು ಎದುರು ಹಾಕಿಕೊಂಡಿರುವುದಕ್ಕೆ ಕೆಲವು ಮಾಧ್ಯಮಗಳು ಇದೊಂದು ರಿಮೇಕ್ ಸಿನಿಮಾ ಎಂದು ಬಿಂಬಿಸುತ್ತಿದೆ. ಆದರೆ ನಾವು ಒಂದು ಸೀದಾ ಸಾದಾ ಸಿನಿಮಾ ಮಾಡಿದ್ದು ಬೆಂಬಲಿಸಬೇಕು ಎಂದು ನಿರ್ಮಾಪಕರು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಬೀರ್ ಗೆ ಅಮೀರ್ ಖಾನ್ ಪ್ರಶಂಸೆ